ದಕ್ಷಿಣ ಕನ್ನಡ ಜಿಲ್ಲೆಯ ಭೂಮಾಪನ ಇಲಾಖೆಯ ಇಬ್ಬರಿಗೆ ಶುಕ್ರವಾರ (ಸೆ.27) ಬೆಳಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದಲ್ಲಿ ನಡೆಯುವ ಅಭಿನಂದನಾ ಸಭೆಯಲ್ಲಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುತ್ತದೆ.
ಸರಕಾರಿ ಭೂಮಾಪಕರ ಪೈಕಿ ರಾಜ್ಯದ 31 ಮಂದಿಗೆ ಈ ಗೌರವ ಲಭಿಸಿದ್ದು, ಅವರಲ್ಲಿ ಬಂಟ್ವಾಳದ ನಿಶಾಂತ್ ಅವರಿಗೆ ಅವಕಾಶ ದೊರಕಿದೆ. ಅಂತೆಯೇ ಪರವಾನಗಿ ಭೂಮಾಪಕರ ಪೈಕಿ 33 ಮಂದಿಗೆ ಗೌರವ ಲಭಿಸಿದ್ದು, ಅವರಲ್ಲಿ ದಕ್ಷಿಣ ಕನ್ನಡದ ಮಂಗಳೂರಿನ ಪುಟ್ಟೇಗೌಡ ಕೆ.ಎಂ. ಸೇರಿದ್ದಾರೆ. ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಚಟುವಟಿಕೆಗಳ ಪೈಕಿ, ಮೋಜಿಣಿ ತಂತ್ರಾಂಶದಲ್ಲಿ ವಿಲೇಯಾದ ಪ್ರಗತಿ, ಆಕಾರಬಂದ್ ಗಣಕೀಕರಣ, ದಾಖಲೆಗಳ ಪುನರ್ ನಿರ್ಮಾಣ, ಕೆರೆ ರಾಜಾಕಾಲುವೆ, ಅರಣ್ಯ ಜಮೀನು ಸಹಿತ ಸರಕಾರಿ ಜಮೀನು ಅಳತೆ ಕೆಲಸ, ಆರ್ ಸಿ ಸಿ ಎಂ ಎಸ್ ಪ್ರಗತಿ ಇವುಗಳ ಬಗ್ಗೆ ಸಾಧಿಸಿರುವ ಪ್ರಗತಿಯನ್ನು ಮಾನದಂಡವಾಗಿರಿಸಿ ಇವರನ್ನು ಸರಕಾರ ವತಿಯಿಂದ ಅಭಿನಂದಿಸಲಿದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಸೇವಾಚಟುವಟಿಕೆಗಳಿಗೆ ಅಭಿನಂದನೆ: ಭೂಮಾಪನ ಇಲಾಖೆಯ ದಕ್ಷಿಣ ಕನ್ನಡದ ಇಬ್ಬರಿಗೆ ಅವಕಾಶ"
Be the first to comment on "ಸೇವಾಚಟುವಟಿಕೆಗಳಿಗೆ ಅಭಿನಂದನೆ: ಭೂಮಾಪನ ಇಲಾಖೆಯ ದಕ್ಷಿಣ ಕನ್ನಡದ ಇಬ್ಬರಿಗೆ ಅವಕಾಶ"