ಪಾಣೆಮಂಗಳೂರು ಪೇಟೆ ಸಂಪರ್ಕ ರಸ್ತೆಯಿಂದ ಮಾರುತಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತದಲ್ಲಿ ತುಂಬಿದ್ದ ನೀರಿಗೆ ಬಿದ್ದ ಘಟನೆ ಭಾನುವಾರ ರಾತ್ರಿ ನಡೆದಿದೆ. ರಾತ್ರಿ ಸುಮಾರು 11.30ಕ್ಕೆ ಈ ಘಟನೆ ನಡೆದಿದ್ದು, ಭಾರಿ ಮಳೆ ಇದ್ದ ಸಂದರ್ಭ ಅನಂತಕೃಷ್ಣ ಎಂಬವರು ಚಲಾಯಿಸುತ್ತಿದ್ದ ಕಾರು ಹೊಂಡ ತಪ್ಪಿಸುವ ವೇಳೆ ಪ್ರಪಾತಕ್ಕೆ ಉರುಳಿದೆ. ಆದರೆ ಚಾಲಕನಿಗೆ ಗಾಯವಾಗಿಲ್ಲ. ಕಾರು ಜಖಂಗೊಂಡಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ಕ್ರೇನ್ ಬಳಸಿ ಅದನ್ನು ಮೇಲಕ್ಕೆತ್ತಲಾಯಿತು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…