ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪೆರಾಜೆ ಹಾಗೂ ಶ್ರೀ ಗುಡ್ಡ ಚಾಮುಂಡೇಶ್ವರಿ ಸೇವಾ ಟ್ರಸ್ಟ್ (ರಿ.), ಪೆರಾಜೆ ಇವರ ಸಹಯೋಗದಲ್ಲಿ ನಡೆಯಲಿರುವ 17ನೇ ವರ್ಷದ ಪೆರಾಜೆ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ಸೆ.14ರಂದು ಸೋಮವಾರ ಪೆರಾಜೆ ಶಾಲಾ ವಠಾರದಲ್ಲಿ ಗಣೇಶೋತ್ಸವ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಸಮಿತಿ ಅಧ್ಯಕ್ಷ ಮಾಧವ ಕುಲಾಲ್ ಪಾಲ್ಯ, ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಬುಡೋಳಿಗುತ್ತು ಹಾಗೂ ಪುರುಷೋತ್ತಮ ಮಡಲ, ಕಾರ್ಯದರ್ಶಿ ರಾಘವ ಏಣಾಜೆ, ಕೋಶಾಧಿಕಾರಿಗಳಾದ ಉಮೇಶ್ ಎಸ್.ಪಿ. ಹಾಗೂ ದೇವದಾಸ ಗೌಡ ಬಲ್ಲಮಜಲು, ಶ್ರೀ ಗುಡ್ಡ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಪೆರಾಜೆ, ಸ್ಥಾಪಕಾಧ್ಯಕ್ಷ ಹರೀಶ್ ರೈ ಪೆರಾಜೆ, ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಸಂದೇಶ್ ಪೆರಾಜೆ, ಪ್ರಮುಖರಾದ ವನಿತಾ ರಾಜೇಶ್, ಪ್ರದೀಪ್ ನಾಯ್ಕ್ ಮಡಲ, ಯಶೋಧರ ಆಚಾರ್ಯ, ಯೋಗೀಶ್ ಅಡ್ಕರಕೋಡಿ, ಜೀವನ್ ಪೆರಾಜೆ, ಲಕ್ಷ್ಮೀಶ್ ಮಾಸ್ಟರ್, ನಾಗೇಶ್ ಕೊಂಕಣಪದವು ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಸೋಮನಾಥೇಶ್ವರ ದೇವಸ್ಥಾನ, ಕುರ್ನಾಡು ಇಲ್ಲಿನ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಹರಿ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹವನ, ಮೂರ್ತಿ ಪ್ರತಿಷ್ಠೆ, ಧ್ವಜಾರೋಹಣ ಹಾಗೂ ಭಜನೆ ನಡೆಯಲಿದೆ. ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸಂಜೆ ಗಣಪತಿ ಶೋಭಾಯಾತ್ರೆ ನಡೆಯಲಿದೆ ಎಂದು ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕುಲಾಲ್ ಪಾಲ್ಯ ತಿಳಿಸಿದ್ದಾರೆ
(more…)