ಮಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಂಗಳೂರಿನಲ್ಲಿ ಅಧಿವೇಶನ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವ ಕಾರಣ ಮಂಗಳೂರಿನ ರಂಗೋಲಿ ಕಲಾವಿದೆ ವೀಣಾ ಐತಾಳ್ ಮುಖ್ಯಮಂತ್ರಿಯವರ ರಂಗೋಲಿ ಕಲಾಕೃತಿಯನ್ನು ಮಾಡಿದ್ದಾರೆ.
ಈ ಕಲಾಕೃತಿಯ ಛಾಯಾಚಿತ್ರಕ್ಕೆ ಚೌಕಟ್ಟು ನಿರ್ಮಿಸಿ ಇದನ್ನು ಮುಖ್ಯಮಂತ್ರಿಯವರಿಗೆ ನೀಡಲಿದ್ದಾರೆ. ಇದರ ಜೊತೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯ ಮಂತ್ರಿಯವರ ಕಾರ್ಯಕ್ರಮದ ಸಮೀಪ 20 ಅಡಿ ಉದ್ದಗಲದ 2 ಬ್ರಹತ್ ರಂಗೋಲಿ ಕಲೆಯ ಕಲಾಕೃತಿಯನ್ನು ಮಾಡಲಿದ್ದಾರೆ. ತುಳುನಾಡಿನ ಸಾಂಸ್ಕೃತಿಕ ಪ್ರತೀಕಗಳಾದ ಯಕ್ಷಗಾನ ಮತ್ತು ಕಂಬಳದ ವಿನ್ಯಾಸವನ್ನು ಈ ಕಲಾಕೃತಿಗಳಲ್ಲಿ ಮಾಡಲಿದ್ದಾರೆ.
ವೀಣಾ ಐತಾಳ ಅವರು ಈಗಾಗಲೇ ಹಲವಾರು ರಂಗೋಲಿ ಕಲಾಕೃತಿಗಳನ್ನು ಅಲ್ಲಲ್ಲಿ ಮಾಡಿರುತ್ತಾರೆ. ಇವರ ರಂಗೋಲಿಯ ವಿಶೇಷವೆಂದರೆ ಕಡು ಮತ್ತು ತಿಳಿ ಬಣ್ಣವನ್ನು ಮಿಶ್ರ ಮಾಡಿ, ಆ ರಂಗೋಲಿಗೆ ಸಹಜ ಭಾವ, ನೈಜ ಜೀವ ನೀಡುವ ಪ್ರಬುದ್ಧತೆ. 18ರಂದು ನಡೆಯುವ ಕಾರ್ಯಕ್ರಮಕ್ಕೆ ಇಂದಿನಿಂದಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಂಗೋಲಿ ಕಲಾಕೃತಿ ಮಾಡಲು ಆರಂಭಿಸಿದ್ದಾರೆ,
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…