ಬಂಟ್ವಾಳ: ಬಿ.ಸಿ.ರೋಡ್ ನಲ್ಲಿ ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ 47ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆರಂಭಗೊಂಡಿದೆ. ಸೆ.17ಕ್ಕೆ ಶೋಭಾಯಾತ್ರೆಯೊಂದಿಗೆ ಕಾರ್ಯಕ್ರಮ ಕೊನೆಗೊಳ್ಳಲಿದೆ.
ಈ ಸಂದರ್ಭ ಸಮಿತಿ ಅಧ್ಯಕ್ಷ ಎಂ.ಸತೀಶ್ ಭಂಡಾರಿ, ರಕ್ತೇಶ್ವರಿ ದೇವಿ ಸನ್ನಿಧಿ ಅಧ್ಯಕ್ಷ ಬಿ.ಮೋಹನ್, ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಸತೀಶ್ ಶೆಟ್ಟಿ ಮೊಡಂಕಾಪು, ಉಪಾಧ್ಯಕ್ಷರಾದ ಸುರೇಶ್ ಕುಮಾರ್ ಕೈಕಂಬ, ಭಾಸ್ಕರ ಟೈಲರ್ ಕಾಮಾಜೆ, ಚರಣ್ ಜುಮಾದಿಗುಡ್ಡೆ, ಜೊತೆಕಾರ್ಯದರ್ಶಿಗಳಾದ ರಾಜೇಶ್ ಬಿ., ಪ್ರದೀಪ್ ಕೆ.ಎನ್, ಕೋಶಾಧ್ಯಕ್ಷರಾಧ ಎಚ್. ಶ್ರೀಧರ ಶೆಣೈ, ಜೊತೆ ಕೋಶಾಧ್ಯಕ್ಷರಾದ ಆಶಾ ಪಿ. ರೈ, ಕಾರ್ಯಕಾರಿ ಸಮಿತಿ ಸದಸ್ಯರಾಧ ಕಿರಣ್ ಕುಮಾರ್, ಶ್ರೀಧರ್ ಅಲೆತ್ತೂರು, ನರೇಶ್ ಹೊಳ್ಳ ಕಳ್ಳಿಮಾರ್, ಶರತ್ ಕುಮಾರ್, ಪ್ರಣಾಮ್ ಅಜ್ಜಿಬೆಟ್ಟು, ಗೀತಾ ವೈ ಶೆಟ್ಟಿ, ಲಕ್ಷಣ್ ರಾಜ್, ಮಾಧವ ಕೈಕುಂಜೆ, ನವೀನ್ ಶೆಟ್ಟಿ ಮಿತ್ತಬೈಲ್, ನಾಗೇಶ್ ಕುಮಾರ್, ಭೋಜ ಸಾಲ್ಯಾನ್, ಶೈಲೇಶ್ ಕೈಕುಂಜೆ, ಅಕ್ಷಯ್ ಕಾಮಾಜೆ, ರಕ್ತೇಶ್ವರಿ ದೇವಿ ಸನ್ನಿಧಿಯ ಪದಾಧಿಕಾರಿಗಳು ಹಾಜರಿದ್ದರು. ರಕ್ತೇಶ್ವರಿ ದೇವಿ ಸನ್ನಿಧಿ ಪ್ರಧಾನ ಅರ್ಚಕ ರಘುಪತಿ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. 15ರಂದು ಸಂಜೆ 6ರಿಂದ ಸನಾತನ ಯಕ್ಷಾಲಯದಿಂದ ರಾಕೇಶ್ ರೈ ಅಡ್ಕ ಸಂಯೋಜನೆಯಲ್ಲಿ ಭಸ್ಮಾಸುರ ಮೋಹಿನಿ ಯಕ್ಷಗಾನ, 16ರಂದು ಸಂಜೆ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಅಭಿನಯದ ಒಂತೆ ಲೇಟಾಂಡ್ ಆಂಡಲ.. ನಾಟಕ ಪ್ರದರ್ಶನ ನಡೆಯುವುದು. 15ರಂದು ಎ.ಜೆ.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಗಣೇಶ್ ಮೆಡಿಕಲ್ಸ್ ಸಹಯೋಗದಲ್ಲಿ ಆರೋಗ್ಯ ಶಿಬಿರ ನಡೆಯಲಿದೆ. 17ರಂದು ಮಧ್ಯಾಹ್ನ 3.30ಕ್ಕೆ ಎಸ್.ಎನ್.ಹೊಳ್ಳ ಅವರ ಚಿಲಿಪಿಲಿ ಗೊಂಬೆಗಳ ಬಳಗದ ನೇತೃತ್ವದಲ್ಲಿ ಗೊಂಬೆ ಕುಣಿತ ಸಹಿತ ವೈಭವದ ಶೋಭಾಯಾತ್ರೆ ಬಿ.ಸಿ.ರೋಡ್ ಗಣೇಶೋತ್ಸವ ನಡೆಯುವ ಸ್ಥಳದಿಂದ ಕೈಕಂಬಕ್ಕೆ ತೆರಳಿ, ಅಲ್ಲಿಂದ ಬಿ.ಸಿ.ರೋಡ್ ಮಯ್ಯರಬೈಲು, ಭಂಡಾರಿಬೆಟ್ಟು, ಬಂಟ್ವಾಳ ನೆರೆ ವಿಮೋಚನಾ ರಸ್ತೆಯಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ನದಿಯಲ್ಲಿ ವಿಸರ್ಜನೆ ನಡೆಯಲಿದೆ.