ಸಜೀಪಮುನ್ನೂರಿನ ಮರ್ತಾಜೆಗುತ್ತು ಶ್ರೀ ಮಲರಾಯ ಗ್ರಾಮ ಸಮಿತಿ ವತಿಯಿಂದ ಮರ್ತಾಜೆ ಮಣ್ಣುದ ಕೆಸರ್ದ ಗೊಬ್ಬು ಕೂಟ ನಡೆಯಿತು.
ಮಲರಾಯ ದೈವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ನಂತರ ಮಲರಾಯ ಚಾವಡಿ ವೇದಿಕೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಸಾಧ್ವಿ ಬಂಗೇರ ತಂಡ ಪ್ರಾರ್ಥನೆ ನೆರವೇರಿಸಿದರು. ಮಲರಾಯ ದೈವಸ್ಥಾನದ ಗಡಿ ಪ್ರಧಾನರಾದ ಸುಕುಮಾರ್ ಬಂಟ್ವಾಳ್ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಮಹಮ್ಮಾಯಿ ಕ್ಷೇತ್ರ ಕಾರಂಬಡೆಯ ಅನುವಂಶಿಕ ಅರ್ಚಕರಾದ ಅರುಣ್ ಕುಮಾರ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಹಿಂದು ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಗಂಗಾಧರ್ ಭಂಡಾರಿ ಆಳ್ವಾರಪಾಲು, ನಾಲ್ಕೆತ್ತಾಯ ದೈವಸ್ಥಾನದ ಗಡಿಪ್ರಧಾನರಾಯಿನ ಸುನೀತ್ ಯಾನೆ ಶಂಕರ ಪೂಜಾರಿ ಕರಂದಾಡಿ, ತುಳು ಕೂಟ ಅಧ್ಯಕ್ಷ ಸುದರ್ಶನ್ ಜೈನ್ , ಸುಬ್ರಾಯ ದೇವಸ್ಥಾನ ಮುಂಡೂರು ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಧನಂಜಯ ಕುಲಾಲ್, ಪಾಣೆಮಂಗಳೂರು ರೈತರ ಸೇ. ಸ. ಸಂಘ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ತಿಮ್ಮಪ್ಪ ಶೆಟ್ಟಿ ಕುಂಬಾರ್ ಹಾಸನ, ಲಲಿತಾಶ್ರೀ ಪ್ರೀತಮ್ ರೈ, ಪಿಡಿಒ ನಾಗೇಶ್ ಮರ್ತಾಜೆ, ಕೆನರಾ ಬ್ಯಾಂಕ್ ಡಿವಿಜನಲ್ ಮೆನೇಜರ್ ಪುರಂದರ ದೇರಾಜೆಬೊಟ್ಟು, ಧರ್ಮಸ್ಥಳ ಯೋಜನೆ ಯೋಜನಾಧಿಕಾರಿ ಜಯಾನಂದ, ಸಮಾಜಸೇವಾ ಸಹಕಾರಿ ಸಂಘ ನಿರ್ದೇಶಕ ಅರುಣ್ ಕುಮಾರ್ ಕುಕ್ಕುದಕಟ್ಟೆ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಸಂಘ, ಸಂಸ್ಥೆಗಳ ಪ್ರಮುಖರಾದ ಜಯೇಶ್ ಗೋವಿಂದ್, ಕಿಶೋರ್ ಆಚಾರ್ಯ, ಪರಮೇಶ್ವರ್ ಸಂಜೀವ ಪೂಜಾರಿ ಸುಭಾಸ್ ನಗರ, ಸೀತಾರಾಮ ಸಾಲಿಯಾನ್ ಮುರುಳಿದಾಸ್ ಕುಲಾಲ್, ನವೀನ್ ಸುವರ್ಣ ಮಿತ್ತಕಟ್ಟ, ಪದ್ಮನಾಭ ನಾರ್ಯ , ಶಿವಲಕ್ಷ್ಮಿ ಮಂಗಳೂರು,ಭಾಗವಹಿಸಿದ್ದರು
ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಗ್ರಾಮದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಶಿವರಾಮ್ ಮರ್ತಾಜೆ ಸ್ವಾಗತಿಸಿ , ಸಂಘಟನ ಕಾರ್ಯದರ್ಶಿ ಸಂತೋಷ್ ಮರ್ತಾಜೆ ವಂದಿಸಿದರು. ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು