ಭಾನುವಾರ ಮಧ್ಯಾಹ್ನದ ಬಳಿಕ ಬಂಟ್ವಾಳದ ಹಲವೆಡೆ ಭಾರಿ ಮಳೆಯಾಗಿದ್ದು, ಕಲ್ಲಡ್ಕದಲ್ಲಂತೂ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಹೆದ್ದಾರಿ ಅಕ್ಷರಶಃ ಹೊಳೆಯಂತಾಯಿತು. ಯಾವುದು ಗುಂಡಿ, ಯಾವುದು ರಸ್ತೆ ಎಂದು ಗುರುತೇ ಸಿಗದಂತೆ ಫ್ಲೈಓವರ್ ಕಾಮಗಾರಿ ನಡೆಯುವ ಪ್ರದೇಶಗಳ ಸಮೀಪವೆಲ್ಲಾ ನದಿಯಂತೆ ನೀರು ಹರಿಯಿತು. ಇದರ ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು.ಯಾಕೆಹೀಗಾಯಿತು?-ಮುಂದೆಓದಿರಿ
ಸಮರ್ಪಕವಾಗಿ ನೀರು ಹರಿದುಹೋಗುವ ತಾತ್ಕಾಲಿಕ ವ್ಯವಸ್ಥೆಯನ್ನಾದರೂ ಮಾಡದೇ ಇದ್ದರೆ, ಕಲ್ಲಡ್ಕದಲ್ಲಿ ಮಳೆ ಬಂದಾಗ ಹೊಳೆಯಂಥ ವಾತಾವರಣ ಉಂಟಾಗುತ್ತದೆ ಎಂಬ ಭೀತಿಯನ್ನು ಮಳೆಗಾಲದ ಮೊದಲೇ ಎಲ್ಲರೂ ವ್ಯಕ್ತಪಡಿಸಿದ್ದರು. ಮಾಧ್ಯಮಗಳಲ್ಲೂ ಇದು ವರದಿಯಾಗಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಎಂದು ಸೂಚಿಸಿದ್ದರೆ, ಇತ್ತೀಚೆಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರೂ ಇದನ್ನು ಪುನರುಚ್ಛರಿಸಿದ್ದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಲ್ಲಡ್ಕದಲ್ಲಿ ಸಂಚರಿಸಿ, ಪರಿಸ್ಥಿತಿ ಅವಲೋಕಿಸಿ ರಸ್ತೆ ದುರಸ್ತಿಗೆ ಹಾಗೂ ನೀರು ಹರಿದುಹೋಗುವ ಕುರಿತು ವ್ಯವಸ್ಥೆ ಕಲ್ಪಿಸುವಂತೆ ಹೆದ್ದಾರಿ ಅಧಿಕಾರಿಗಳಿಗೆ ಹೇಳಿದ್ದರು. ಆದರೆ ಮುಂದೇನಾಗಿದೆ… ಪ್ರತ್ಯಕ್ಷ ನೋಡಿ.
Be the first to comment on "KALLADKA – ಕಲ್ಲಡ್ಕದಲ್ಲಿ ಮಳೆಗೆ ಹೆದ್ದಾರಿಯಲ್ಲಿ ಪ್ರವಾಹ"