ಬಿ.ಸಿ.ರೋಡ್ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲವಾದ ಕಂಪೌಂಡ್ ಜತೆ ಇರುವ ಗೇಟ್ ಬುಧವಾರ ಮಧ್ಯಾಹ್ನ ಮಳೆಯೊಂದಿಗೆ ಬಲವಾದ ಗಾಳಿ ಬೀಸಿದ ಸಂದರ್ಭ ಕುಸಿದಿದೆ. ಇದರಿಂದ ಗೇಟ್ ವಾಲಿಕೊಂಡಿದ್ದು, ಅದಕ್ಕೆ ಜೋಡಿಕೊಂಡು ಇರುವ ಕಲ್ಲುಗಳೂ ಸಡಿಲಗೊಂಡಿವೆ. ಈ ಗೇಟ್ ಪಕ್ಕದಲ್ಲೇ ಶಾಲಾ ಮಕ್ಕಳ ಶೌಚಾಲಯವಿದ್ದು, ಅಲ್ಲಿಗೆ ತೆರಳುವ ಪುಟ್ಟ ಮಕ್ಕಳು ಈ ಗೇಟ್ ಸನಿಹವೇ ತೆರಳುತ್ತಿದ್ದು, ಇದು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಇದೀಗ ಮಕ್ಕಳು ಜೀವಭಯದಲ್ಲೇ ತೆರಳಬೇಕಾಗಿದ್ದು, ಶೀಘ್ರ ದುರಸ್ತಿಯಾಗದಿದ್ದರೆ, ಅಪಾಯ ಉಂಟಾಗಬಹುದು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತುರ್ತಾಗಿ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮತ್ತೊಮ್ಮೆ ಮನವಿ ಮಾಡಲಾಗಿದೆ.
Be the first to comment on "ಮಳೆಗೆ ವಾಲಿದ ಶಾಲಾ ಗೇಟ್, ಕಂಪೌಂಡ್ ಕುಸಿತದ ಭೀತಿಯಲ್ಲಿ"