ಸಮಾಜಸೇವಕ, ರಂಗಕರ್ಮಿ ಕಾಪು ಲೀಲಾಧರ ಶೆಟ್ಟಿ ಪತ್ನಿ ಸಮೇತ ನೇಣಿಗೆ ಶರಣಾಗಿದ್ದಾರೆ. ಲೀಲಾಧರ ಶೆಟ್ಟಿ ಅವರಿಗೆ 68 ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿ ಅವರಿಗೆ 58 ವಯಸ್ಸಾಗಿತ್ತು. ಮಂಗಳವಾರ ಮಧ್ಯರಾತ್ರಿ ತಮ್ಮ ಮನೆಯ ಪಕ್ಕಾಸಿಗೆ ಒಂದೇ ಸೀರೆಯನ್ನು ಬಿಗಿದುಕೊಂಡು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.
ಸರಳ ಸಜ್ಜನ ವ್ಯಕ್ತಿಯಾಗಿದ್ದ ಲೀಲಾಧರ ಶೆಟ್ಟಿ ಅವರು ಒಂದು ಬಾರಿ ಕಾಪು ಕ್ಷೇತ್ರದಿಂದ ಚುನಾವಣೆಗೆ ವಿಧಾನಸಭೆಗೆ ಅದೃಷ್ಟ ಪರೀಕ್ಷೆ ಮಾಡಿದ್ದರು. ಕಾಪು ರಂಗತರಂಗ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿದ ಅವರು ಭಾರಿ ಜನಪ್ರಿಯತೆ ಗಳಿಸಿದ್ದರು. ಅಶಕ್ತರ ನೆರವಿಗೆ ಸದಾ ಮುನ್ನುಗ್ಗುತ್ತಿದ್ದ ಲೀಲಾಧರ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಆಪ್ತರಾಗಿದ್ದರು. ಕಾಪು ಬಂಟರ ಸಂಘದ ಮಾಜಿ ಅಧ್ಯಕ್ಷ, ಭಜನಾ ಮಂಡಳಿಯ ಸಂಚಾಲಕರಾಗಿದ್ದ ಅವರು, ಅತ್ಯುತ್ತಮ ನಟ ಮತ್ತು ನಿರ್ದೇಶಕರಾಗಿದ್ದರು. ಇತ್ತೀಚೆಗೆ ತನ್ನ ಹೊಸ ನಾಟಕವನ್ನೂ ರಚಿಸಿ, ರಂಗಪ್ರಯೋಗಕ್ಕೆ ತರಲು ಹೊರಟಿದ್ದ ಲೀಲಾಧರ ಶೆಟ್ಟಿ, ಸ್ಥಳೀಯರ ಪಾಲಿನ ಲೀಲಣ್ಣ ದಂಪತಿ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಆಘಾತಕಾರಿ ಹಾಗೂ ಆಶ್ಚರ್ಯಕಾರಿಯಾಗಿದೆ.
Be the first to comment on "ಖ್ಯಾತ ಸಮಾಜಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ"