ಕಲ್ಲಡ್ಕ ವಲಯ ಬಿಲ್ಲವ ಸಂಘದ ಆಶ್ರಯದಲ್ಲಿ ಗುರುಪೂಜೆ, ಆಟೋಟ ಸ್ಪರ್ಧೆಯ ಪೂರ್ವಭಾವಿ ಸಭೆ ಕಲ್ಲಡ್ಕದ ಮೈಸ್ ಕಂಪ್ಯೂಟರ್ ಕಚೇರಿಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕೆಪುಲಕೋಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿಸೆಂಬರ್ 10ರಂದು ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಕ್ರೀಡಾಕೂಟವನ್ನು ಹಾಗೂ ಡಿಸೆಂಬರ್ 24 ರಂದು ಕಲ್ಲಡ್ಕ ಪಂಚವಟಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಗುರು ಪೂಜೆ ಕಾರ್ಯಕ್ರಮ ನಡೆಸುವುದಾಗಿ ತಿಳಿಸಲಾಯಿತು.
ಕಲ್ಲಡ್ಕ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಹೊಸಕಟ್ಟ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣು ಪೂಜಾರಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ್ ಬಂಗೇರ, ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ನಾರುಕೋಡಿ, ಕಲ್ಲಡ್ಕಬಿಲ್ಲವ ಮಹಿಳಾ ಸಂಘದ ಅಧ್ಯಕ್ಷ ಪುಷ್ಪ ದೇವಸ್ಯ, ಬಿಲ್ಲವ ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್ ತೋಟ, ಜಯಪ್ರಕಾಶ್ ತೆಕ್ಕಿಪಾಪು, ಮಾಧವ ಸಾಲಿಯಾನ್ ಕುದ್ರಬೆಟ್ಟು, ಶ್ರೀಧರ ಅಮ್ಟೂರು, ಶಿವಾನಂದ ಎಳ್ತೀಮಾರ್, ಸಂತೋಷ್ ಕುಮಾರ್ ಬೊಳ್ಪೋಡಿ, ಶೇಖರ್ ದಾಸಕೋಡಿ, ಬಿ ಆರ್ ಜಯಪ್ರಶಾಂತ್, ಸುಧಾಕರ್ ವೀರಕಂಭ, ಮೋಹನ್ ದಾಸ್ ಪಾದೆ, ಸತೀಶ್ ಕುಮಾರ್ ಬಾಯಿಲ,ಮೋಹನ್ ನರಹರಿನಗರ್, ಜಯಂತ್ ಕಟ್ಟೆಮಾರ್, ಪ್ರದೀಪ್ ಶಾಂತಿಪಳಿಕೆ, ರೋಹಿಣಿ ಸುಧೆಕಾರ್, ಲಾವಣ್ಯ ಕುಂಟಿಪಾಪು, ಸುಧಾ ಸುಧೆಕಾರ್, ಸುಜಾತ ಪೂರ್ಲಿಪಾಡಿ, ಮೊದಲಾದವರು ಉಪಸ್ಥಿತರಿದ್ದು ಸೂಕ್ತ ಸಲಹೆ ನೀಡಿದರು.ಯೋಗೀಶ್ ತೋಟ ಸ್ವಾಗತಿಸಿ, ಲೋಕೇಶ್ ಶಾಂತಿಪಳಿಕೆ ವಂದಿಸಿದರು.
Be the first to comment on "ಬಿಲ್ಲವ ಸಂಘದಿಂದ ಗುರುಪೂಜೆ, ಆಟೋಟ ಸ್ಪರ್ಧೆ: ಪೂರ್ವಭಾವಿ ಸಭೆ"