ಫರಂಗಿಪೇಟೆ

ಪುದು ಗ್ರಾಪಂ: ಮಳೆಯ ನಡುವೆ ಉಪಚುನಾವಣೆಗೆ ಮತದಾನ

ಪುದು ಗ್ರಾ.ಪಂ.ನ ಒಂದು ಸದಸ್ಯ ಸ್ಥಾನಕ್ಕೆ ಭಾನುವಾರ ಮಳೆಯ ನಡುವೆ ಮತದಾನ ಪ್ರಕ್ರಿಯೆಗಳು ನಡೆದವು. ಬಂಟ್ವಾಳ ತಾಲೂಕಿನ ಮಂಗಳೂರು ಕ್ಷೇತ್ರದ ಪುದು ಗ್ರಾಮಪಂಚಾಯತ್ ನಲ್ಲಿ ಸದಸ್ಯರೋರ್ವರು ಮರಣ ಹೊಂದಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯಿತು.  ಇಲ್ಲಿ 414 ಪುರುಷರು, 416 ಮಹಿಳೆಯರು ಸೇರಿ ಒಟ್ಟು 830 ಮತದಾರರು ಇದ್ದಾರೆ. ಇವರ ಪೈಕಿ 284 ಪುರುಷರು, 288 ಮಹಿಳೆಯರು ಸೇರಿ ಒಟ್ಟು 572 ಮಂದಿ ಮತ ಚಲಾಯಿಸಿದ್ದಾರೆ. ಪುರುಷರು ಶೇ.68.60 ಹಾಗೂ ಮಹಿಳೆಯರು ಶೇ.69.23 ಸೇರಿ ಒಟ್ಟು ಶೇ.68.92 ಮತದಾನವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸುಜೀರು (ದಕ್ಷಿಣ ಭಾಗ) ಮತಗಟ್ಟೆಯಲ್ಲಿ ಮತದಾನ ನಡೆಯಿತು. ಜುಲೈ  26 ರಂದು ಮತ ಎಣಿಕೆ ನಡೆಯಲಿದೆ.ತೆರವಾದ ಒಂದು ಸ್ಥಾನಕ್ಕೆ ಒಟ್ಟು ಮೂರು ಮಂದಿ ಸ್ಪರ್ಧೆಗಿಳಿದಿದ್ದು, ಅಬ್ದುಲ್ ಲತೀಫ್,  ಮುಹಮ್ಮದ್ ಅಶ್ರಫ್, ಮೊಹಮ್ಮದ್ ಇಕ್ಬಾಲ್ ನಡುವೆ ಯಾರು ಗೆಲ್ಲುವರು ಎಂಬುದು ಕುತೂಹಲಕಾರಿ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ