ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುಖ್ಯ ರಸ್ತೆಗಳಲ್ಲೊಂದಾದ ಮುರುವ ಕೊಮ್ಮುಂಜೆ ಕೂಟೇಲು ರಸ್ತೆಗೆ ಒಳಪಡುವ ನೂರಾರು ಮಂದಿ ಈಗ ರಸ್ತೆ ದುರವಸ್ಥೆಯಿಂದ ಕಂಗಾಲಾಗಿದ್ದಾರೆ. ಶಾಲೆ, ಕಾಲೇಜು ಕಚೇರಿಗಳಿಗೆ ತೆರಳುವವರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಸುಮಾರು ಐದು ಕಿ.ಮೀ.ಇರುವ ಈ ರಸ್ತೆಯು ಮೂರು ಕಿ.ಮೀ.ಯಷ್ಟು ಹಂತ ಹಂತವಾಗಿ ಡಾಮರೀಕರಣಗೊಂಡಿದೆ.ಮುರುವ ದಿಂದ ಅರಳತ್ತಡ್ಕದ ಸುಮಾರು ಒಂದೂವರೆ ಕಿ.ಮೀ.ವರೇಗೆ 2019-20ರಲ್ಲಿ ಎಂಪಿಎಲ್ಎಡಿ ಅನುದಾನದ 8 ಲಕ್ಷ ರೂದಲ್ಲಿ ಪುನಃ ತೇಪೆ ಹಚ್ಚುವ ಕೆಲಸ ಜರುಗಿತ್ತು. ಈಗ ಈ ಭಾಗದ ರಸ್ತೆಯು ಸಂಪೂರ್ಣ ಹೊಂಡ ಗುಂಡಿ ಬಿದ್ದು ನಾದುರಸ್ತಿಯಲ್ಲಿದೆ. ವಾಹನ ಸವಾರರು,ಪಾದಚಾರಿಗಳು, ವಿದ್ಯಾರ್ಥಿ ಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲವಂತೂ ಅಸಹನೀಯವೆನಿಸಿದೆ .
ಕೊಮ್ಮುಂಜೆ ಕೂಟೇಲು.ಸುಮಾರು ಇನ್ನೂರೈವತ್ತು ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಮೂರು ಅಂಗನವಾಡಿ ಗಳು,ಆಂಚೆ ಕಚೀರಿ,ಗ್ರಾಮ ಪಂಚಾಯತ್,ಸಹಕಾರಿ ಸಂಘ,ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ,ಕರ್ನಾಟಕ ಬ್ಯಾಂಕ್ ಈ ರಸ್ತೆಗೆ ಹೊಂದಿಕೊಂಡಿವೆ.ಪ್ರತಿದಿನ ನೂರಾರು ವಾಹನಗಳು.ಶಾಲಾವಿದ್ಯಾರ್ಥಿಗಳು,ನಗರಕ್ಕೆ ಉದ್ಯೋಗ ಕ್ಕೆ, ಮತ್ತು ಅನ್ಯಕೆಲಸಗಳಿಗೆ, ಆಸ್ಪತ್ರೆಗೆ ತೆರಳುವ ಮಂದಿ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ.
ಮುರುವ ರಿಂದ ಅರಳತ್ತಡ್ಕದ ಸುಮಾರು ಒಂದೂವರೆ ಕಿ.ಮೀ.ವರೇಗೆ ಪುನಃ ತೇಪೆ ಹಚ್ಚುವ ಕೆಲಸ ಜರುಗಿತ್ತು. ಈಗ ಈ ಭಾಗದ ರಸ್ತೆಯು ಸಂಪೂರ್ಣ ಹೊಂಡ ಗುಂಡಿ ಬಿದ್ದು ನಾದುರಸ್ತಿಯಲ್ಲಿದೆ. ವಾಹನ ಸವಾರರು,ಪಾದಚಾರಿಗಳು, ವಿದ್ಯಾರ್ಥಿ ಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.ಮಳೆಗಾಲವಂತೂ ಅಸಹನೀಯವೆನಿಸಿದೆ.ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿದೆ ಎನ್ನುತ್ತಾರೆ ಸ್ಥಳೀಯರಾದ ವಿಷ್ಣು ಕನ್ನಡಗುಳಿ ಮತ್ತು ರಾಜೇಶ್.
Be the first to comment on "ಮುರುವ ಕೊಮ್ಮುಂಜೆ – ಕೂಟೇಲು ರಸ್ತೆ ದುರವಸ್ಥೆ, ಸಾರ್ವಜನಿಕರ ಪರದಾಟ"