ದುಬೈನಲ್ಲಿ ಭಾರತೀಯ ಕಲಾವಿದರ ಚಿತ್ರಪ್ರದರ್ಶನ, ಶಿಲ್ಪಾಶ್ರೀ – ನಾರಾಯಣ ಕುಂಬಾರ್ ದಂಪತಿ ರಚಿಸಿದ ಚಿತ್ರಗಳ ಅನಾವರಣ

ಪ್ರಸಿದ್ಧ ಚಿತ್ರಕಲಾವಿದ ಬೀದರ್ ನ ನಾರಾಯಣ ಕುಂಬಾರ್ (ಎನ್.ಎಸ್.ಕುಂಬಾರ್) ಅವರೊಂದಿಗೆ ಅವರ ಪತ್ನಿ ಶಿಲ್ಪಾಶ್ರೀ ಹಾಗೂ ಎನ್.ಎಸ್.ಕುಂಬಾರ್ ಆರ್ಟ್ ಅಕಾಡೆಮಿ ವಿದ್ಯಾರ್ಥಿಗಳಿಂದ ಚಿತ್ರಪ್ರದರ್ಶನ ದುಬೈನಲ್ಲಿ ನಡೆಯುತ್ತಿದೆ. ಮಾರ್ಚ್ 18ರಿಂದ ಪ್ರದರ್ಶನ ಆರಂಭಗೊಂಡಿದ್ದು, 25ರವರೆಗೆ ನಡೆಯಲಿದೆ. ದುಬೈ ಇಂಟರ್ನಾಷನಲ್ ಆರ್ಟ್ ಸೆಂಟರ್ ನಲ್ಲಿ ಈ ಪ್ರದರ್ಶನ ಏರ್ಪಟ್ಟಿದೆ.

ಜಾಹೀರಾತು

ವಿಟ್ಲದ ನೆಕ್ಕರೆಕಾಡು ನಿವಾಸಿ, ಉದಯೋನ್ಮುಖ ಚಿತ್ರಕಲಾವಿದೆ ಶಿಲ್ಪಾಶ್ರೀ ಮತ್ತು ಅವರ ಪತಿ, ಬೀದರ್ ನಿವಾಸ್ ಎನ್.ಎಸ್. ಕುಂಬಾರ ಮತ್ತು ಅವರ ಅಕಾಡೆಮಿಯ ವಿದ್ಯಾರ್ಥಿಗಳಾದ  ವಿವಾನ್ ಎಸ್ ಸಿಂಘಾಲ್, ಅಯಾನ್ಸ್ ರುಪಾಣಿ, ಗೀತಾ ತೂಪಲ್ಲಿ, ಸ್ಹೌರ್ಯ ಎಸ್ ಗಂಗಡ್ಕರ್, ಆಶೀಶ್. ಎನ್,  – ಪವನ್, ಜಿ, ಅನನ್ಯ ಎಸ್  ನಾಯಕ್, ಖುಷಿ  ತಟಿನಿ ರಾಯ್, ಸ್ಹ್ರೆಯ ಎಸ್ ಶೇಟ್, ಸ್ವರೂಪ್  ಮುರಗೋಡ್ , ಸ್ಯಹನ  ಪಿ , ಮೇಧಾ  ಎಸ  ಐಎಂಗರ್ , ಅರ್ಜುನ್  ಕೊಂಚಾಡಿ, ವಂದನಾ ವಿ  ದುಡಿ ಅವರ ಚಿತ್ರಪ್ರದರ್ಶನಗಳು ಚಿತ್ರಕಲಾ ಪ್ರದರ್ಶನದಲ್ಲಿವೆ.

ಒಮಾನ್ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಇನ್ಕ್ರಿಡೆಬಲ್ ಟ್ಯಾಲೆಂಟ್ಸ್ ನವರ ಆಯೋಜಿತ ಇಂಟರ್ನ್ಯಾಷನಲ್ ಪೇಂಟಿಂಗ್ ಚಿತ್ರಕಲಾ ಪ್ರದರ್ಶನವಿದು.

ನಾರಾಯಣ್ ಕುಂಬಾರ ಅವರು ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು, ಬೆಂಗಳೂರು ,ರಾಜಸ್ಥಾನ್ ,ದೆಹಲಿ ,ಚಂಡೀಘಡ್ , ಮುಂಬಯಿ, ಒರಿಸ್ಸಾ ,ಹೈದರಾಬಾದ್ ,ಚೆನ್ನೈ ಸಹಿತ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.ಚಿತ್ರಕಲಾವಿದೆ ಶಿಲ್ಪಾಶ್ರೀ ಅವರು ನಿವೃತ್ತ ಯೋಧ, ಯೂನಿಯನ್ ಬ್ಯಾಂಕ್ ನ ನಿವೃತ್ತ ಸ್ಪೆಶಲ್ ಅಸಿಸ್ಟೆಂಟ್ ಕೆ.ವಾಮನ ಅವರ ಪುತ್ರಿ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ದುಬೈನಲ್ಲಿ ಭಾರತೀಯ ಕಲಾವಿದರ ಚಿತ್ರಪ್ರದರ್ಶನ, ಶಿಲ್ಪಾಶ್ರೀ – ನಾರಾಯಣ ಕುಂಬಾರ್ ದಂಪತಿ ರಚಿಸಿದ ಚಿತ್ರಗಳ ಅನಾವರಣ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*