ಶಿವರಾತ್ರಿ ಹಿನ್ನೆಲೆ: ಹಿಂದು ಜಾಗರಣಾ ವೇದಿಕೆ ವತಿಯಿಂದ ಕಾರಿಂಜದಲ್ಲಿ ಶಿವಮಾಲಾಧಾರಣೆ

ಜಾಹೀರಾತು

ಬಂಟ್ವಾಳ: ಕಾರಿಂಜ ಕ್ಷೇತ್ರದಲ್ಲಿ ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಈ ವರ್ಷವೂ ಶಿವಮಾಲಾಧಾರಣೆ ನಡೆಯಲಿದೆ. ಮಾಲಾಧಾರಣೆ ಮಾಡಲಿರುವ ಭಕ್ತರು ತಿರುಲೇಶ್ ಬೆಳ್ಳೂರು ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಸಂಚಾಲಕರು ಇವರನ್ನು ಸಂಪರ್ಕಿಸ ಬಹುದು.9964339978, ಸಹ ಸಂಚಾಲಕರು ಸಂತೋಷ್ ಸುರ್ವಣನಾಡು:9591659660 ಎಂದು ಮುಖಂಡರು ತಿಳಿಸಿದ್ದಾರೆ.

ಕಳೆದ ವರ್ಷದಿಂದ ಶ್ರೀ ಕ್ಷೇತ್ರದಲ್ಲಿ ಸ್ವಾಮಿಜೀಗಳ ಆಶಿರ್ವಾದಿಂದ ದೇವಸ್ಥಾನದ ಅಡಳಿತ ಮಂಡಲಿ ಸಹಕಾರದಿಂದ ಶಿವ ಮಾಲಾಧಾರಣೆ ಮಾಡುವುದರ ಮೂಲಕ ಶಿವರಾತ್ರಿಯಂದು ಶಿವ ಜಾಗರಣೆ ನಡೆಸಲಾಗುತ್ತಿದೆ. ಮೂರು ದಿನಗಳ ಕಾಲ ಫೆ.16ರಿಂದ ಶಿವಮಾಲಾಧಾರಣೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಳೆದ ವರ್ಷಕ್ಕಿಂತ ಜಾಸ್ತಿ ಮಂದಿ ಧಾರಣೆ ಮಾಡುವ ನಿರೀಕ್ಷೆ ಇದೆ ಎಂದು ಹಿಂದು ಜಾಗರಣಾ ವೇದಿಕೆ ವಿಶ್ವಾಸ ವ್ಯಕ್ತಪಡಿಸಿದೆ.

ಫೆ.16ರಂದು ಭಕ್ತರು ಮಾಲಾಧಾರಣೆ ಮಾಡಿಕೊಂಡು ಬೆಳಗ್ಗೆ ಮತ್ತು ಸಂಜೆ 108 ಬಾರಿ ‘’ಓಂ ನಮಃ ಶಿವಾಯ’’ ಪಂಚಾಕ್ಷರಿ ಮಂತ್ರ ಜಪ ಮಾಡಲಿದ್ದಾರೆ. ಶನಿವಾರ ಸಂಜೆ 4 ಗಂಟೆಗೆ ವಗ್ಗ ಜಂಕ್ಷನ್ ನಲ್ಲಿ ಮಾಲಾಧಾರಿಗಳೆಲ್ಲರೂ ಒಟ್ಟು ಸೇರುವರು. ಬಳಿಕ ಸಂಕೀರ್ತನಾ ಯಾತ್ರೆ ಮೂಲಕ ದೇವಸ್ಥಾನಕ್ಕೆ ಸಾಗಲಿದ್ದು, ಶುಚಿರ್ಭೂತರಾಗಿ ದೇವರ ದರ್ಶನ ಮಾಡಲಿದ್ದಾರೆ. ಶಿವಜಾಗರಣೆ ಮಾಡಿ, ಬೆಳಗ್ಗೆ  ಶಿವಮಾಲೆಯ ವಿಸರ್ಜನೆ ಮಾಡಲಾಗುತ್ತದೆ. ರಾತ್ರಿ ಭಕ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಪುತ್ತೂರು, ಸುಳ್ಯ,ವೇಣೂರು, ಈಶ್ವರಮಂಗಲ,ವಿಟ್ಲ ಭಾಗದಿಂದ ಮಾಲಾಧಾರಿಗಳು ಶಿವ ಜಾಗರಣೆ ಮಾಡಲಿದ್ದಾರೆ ಎಂದು ಹಿಂಜಾವೇ ತಾಲೂಕು ಸಂಚಾಲಕ ತಿರುಲೇಶ್ ಬೆಳ್ಳೂರು ತಿಳಿಸಿದ್ದಾರೆ.

 

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಶಿವರಾತ್ರಿ ಹಿನ್ನೆಲೆ: ಹಿಂದು ಜಾಗರಣಾ ವೇದಿಕೆ ವತಿಯಿಂದ ಕಾರಿಂಜದಲ್ಲಿ ಶಿವಮಾಲಾಧಾರಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*