ಜನವರಿ 30 ಮತ್ತು 31ರಂದು ಒಡಿಯೂರು ಕ್ಷೇತ್ರದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ, ಒಡಿಯೂರು ರಥೋತ್ಸವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಆಗಮಿಸಿತು. ಎಲ್ಲ ಭಾಗಗಳಿಂದ ಬಂದ ವಾಹನಗಳು ಕನ್ಯಾನದಲ್ಲಿ ಸೇರಿ ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ಆಗಮಿಸಿತು.
ಚಿತ್ರ: ಕ್ಲಿಕ್ ಪಾಯಿಂಟ್, ಕನ್ಯಾನ PHOTO: CLICK POINT, KANYANA
ಈ ಸಂದರ್ಭ ಸ್ವಾಗತಿಸಿ, ಆಶೀರ್ವಚನ ನೀಡಿದ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿ, ಉಗ್ರಾಣದಲ್ಲಿ ದೀಪ ಬೆಳಗಿಸಿ ಶುಭ ಹಾರೈಸಿದರು. ಸಾಧ್ವಿ ಮಾತನಾನಂದಮಯಿ, ಉದ್ಯಮಿ ವಾಮಯ್ಯ ಶೆಟ್ಟಿ ಚೆಂಬೂರು, ರೇವತಿ ವಾಮಯ್ಯ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಅಧ್ಯಕ್ಷ ಸುರೇಶ್ ರೈ, ಒಡಿಯೂರು ಶ್ರೀಗ್ರಾಮವಿಕಾಸ ಯೋಜನೆಯ ಕಿರಣ್ ಕುಮಾರ್ ಊರ್ವ, ಪ್ರಮುಖರಾದ ಲಿಂಗಪ್ಪ ಗೌಡ, ಸರ್ವಾಣಿ ಪಿ.ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಅಶೋಕ್ ಕುಮಾರ್, ಸೇರಾಜೆ ಗಣಪತಿ ಭಟ್, ಯಶವಂತ ವಿಟ್ಲ, ಮಧುಕಿರಣ್, ರಾಧಾಕೃಷ್ಣ ಪಕ್ಕಳ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ತುಳುನಾಡ ಜಾತ್ರೆ ಹಿನ್ನೆಲೆ: ಒಡಿಯೂರು ಸಂಸ್ಥಾನಕ್ಕೆ ಹರಿದುಬಂದ ಹೊರೆಕಾಣಿಕೆ"
Be the first to comment on "ತುಳುನಾಡ ಜಾತ್ರೆ ಹಿನ್ನೆಲೆ: ಒಡಿಯೂರು ಸಂಸ್ಥಾನಕ್ಕೆ ಹರಿದುಬಂದ ಹೊರೆಕಾಣಿಕೆ"