ಬಂಟ್ವಾಳ: ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಶ್ರೀ ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸಭೆಯು ಆಡಳಿತಾಧಿಕಾರಿ, ಗ್ರಾಮಕರಣಿಕರಾದ ಯಶ್ವಿತಾ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಂದರ್ಭ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಗಣೇಶ್ ಪ್ರಸಾದ್ ಜೆ ಪೂಜಾರಿಯವರನ್ನು ಸರ್ವಸದಸ್ಯರು ಒಮ್ಮತದಿಂದ ಆಯ್ಕೆಮಾಡಿದರು. ನೂತನ ಅಧ್ಯಕ್ಷರಿಗೆ ಆಡಳಿತಾಧಿಕಾರಿ ಅಧಿಕಾರ ಹಸ್ತಾಂತರಿಸಿದರು. ಈ ನೂತನ ಸಮಿತಿಯ ಅವಧಿಯು ಮೂರು ವರ್ಷದ್ದಾಗಿರುತ್ತದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಬೋಗನಾಥ ಏಲಬೆ, ಕೆ.ನಿರಂಜನ ಕೊಲ್ಲೂರು, ವಾಸು ಅಡ್ಡದಪಾದೆ, ಲೋಕೇಶ್ ಪಚ್ಚಿನಡ್ಕ, ಯೋಗೀಶ್ ಸ್ಥಾನದಮನೆ, ಸಂಜೀವ ಶಂಭೂರು, ಪುಷ್ಪ ಸುರೇಶ್ ಬರ್ಕೆ, ಜಯಂತಿ ಆನಂದ ಕೆರೆಕೋಡಿ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಸಭೆ"