ಬಂಟ್ವಾಳ: ಬಂಟ್ವಾಳ ಮಣಿಹಳ್ಳ ಪಣೆಕಳದ ಶ್ರೀ ಮಹಮ್ಮಾಯಿ ದುರ್ಗಾಂಬಾ ದೇವಸ್ಥಾನದಲ್ಲಿ ಡಿ.18ರಂದು ಭಾನುವಾರ ಶ್ರೀ ಆದಿಶಕ್ತಿ ಭದ್ರಕಾಳಿ ಸೇವಾ ಸಮಿತಿ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಸರ್ವೈಶ್ವರ್ಯ ಪೂಜೆ, ಗುರುವಂದನಾ ಕಾರ್ಯಕ್ರಮ ಮತ್ತು ಆಗಮ ಪ್ರವೀಣ ಬಿರುದು ಪ್ರದಾನ ಮಾಡಲಾಗುತ್ತದೆ ಎಂದು ಶ್ರೀ ಮಹಮ್ಮಾಯಿ ದುರ್ಗಾಂಬಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಹಾಬಲ ಬಂಗೇರ ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ವೇಳೆ ಶ್ರೀ ದುರ್ಗಾಂಬಾ ದೇವಸ್ಥಾನದ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಲಾಗುವುದು. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ, ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ ಉಪಸ್ಥಿತಿಯಲ್ಲಿ ನಡೆಯಲಿದ್ದು, ಧಾರ್ಮಿಕ ಉಪನ್ಯಾಸವನ್ನು ಕುಂಟಾರು ರವೀಶ ತಂತ್ರಿ ನೆರವೇರಿಸುವರು. ಇದೇ ವೇಳೆ ಮಣಿಹಳ್ಳ ಪಣೆಕಳದ ವಸಂತ ಭಟ್ ಅವರಿಗೆ ಆಗಮ ಪ್ರವೀಣ ಬಿರುದು ನೀಡಲಾಗುವುದು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇಸಪ್ಪ ಕೋಟ್ಯಾನ್ ಅವರನ್ನು ಸನ್ಮಾನಿಸಲಾಗುವುದು. ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಸಹಿತ ಗಣ್ಯರು ಭಾಗವಹಿಸುವರು ಎಂದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಶ್ರೀ ಮಹಮ್ಮಾಯಿ ದುರ್ಗಾಂಬಾ ಟ್ರಸ್ಟ್ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಕಾರ್ಯದರ್ಶಿ ಉಮೇಶ್ ಕುಲಾಲ್, ಜೀರ್ಣೋಧ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್, ಆದಿಶಕ್ತಿ ಕ್ಷೇತ್ರದ ಅಧ್ಯಕ್ಷ ಲೋಕೇಶ್ ಭಟ್, ಪ್ರಮುಖರಾದ ನಾಗೇಶ್, ಸಂಜೀವ ಮೂಲ್ಯ ಉಪಸ್ಥಿತರಿದ್ದರು.
Be the first to comment on "18ರಂದು ಬಂಟ್ವಾಳದ ಮಹಮ್ಮಾಯಿ ದುರ್ಗಾಂಬಾ ದೇವಸ್ಥಾನದಲ್ಲಿ ಗುರುವಂದನಾ ಕಾರ್ಯಕ್ರಮ, ಆಗಮ ಪ್ರವೀಣ ಬಿರುದು ಪ್ರದಾನ"