ಬಂಟ್ವಾಳ: ಡಿ.17ರಂದು ರಾಜ್ಯದಾದ್ಯಂತ ಎಲ್ಲ ವಿವಿಗಳು ಮತ್ತು ಪದವಿ ಕಾಲೇಜುಗಳನ್ನು ಬಂದ್ ಮಾಡುವ ವಿಚಾರದ ಕುರಿತಾಗಿ ವಿದ್ಯಾರ್ಥಿ ಸಮೂಹದಿಂದ ಬೆಂಬಲ ವ್ಯಕ್ತವಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ ಗೊಂದಲ ಸಹಿತ ವಿವಿಧ ವಿಚಾರ ಮುಂದಿಟ್ಟು ಈ ಬಂದ್ ಆಚರಿಸಲಾಗುತ್ತದೆ ಎಂದು ಎನ್.ಎಸ್.ಯು.ಐ. ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದಕ್ಕೆಲ್ಲ ಸರಕಾರದ ಸ್ಪಂದನೆರಹಿತ ಪ್ರವೃತ್ತಿಯೇ ಕಾರಣ. ಮಂಗಳೂರು ವಿವಿಯಲ್ಲಿ ಪದವಿ ವಿದ್ಯಾರ್ಥಿಗಳು ಫಲಿತಾಂಶ ಘೋಷಣೆಯಾಗದೆ ಸಮಸ್ಯೆಯಲ್ಲಿದ್ದಾರೆ. ಪ.ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್ ಶಿಪ್ ಸಿಗುತ್ತಿಲ್ಲ. ರಾಜ್ಯ ಸರಕಾರ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದೆ ಎಂದವರು ಆಪಾದಿಸಿದರು. ಈ ಸಂದರ್ಭ ರಾಜ್ಯಸಂಯೋಜಕ ವಿನಯ ಕುಮಾರ್ ಸಿಂಧ್ಯ, ತಾಲೂಕು ಉಪಾಧ್ಯಕ್ಷ ಶಾರೂಕ್ ಎ.ಕೆ. ಉಪಸ್ಥಿತರಿದ್ದರು.
Be the first to comment on "ಡಿ.17ರಂದು ರಾಜ್ಯದ ಎಲ್ಲ ವಿವಿ, ಪದವಿ ಕಾಲೇಜ್ ಬಂದ್: ಎನ್ ಎಸ್ ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್"