ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಎನ್‌ಪಿಎಸ್ ನೌಕರರ ಪರ ಧ್ವನಿ ಎತ್ತುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ಸರಕಾರಿ ಎನ್‌ಪಿಎಸ್ ನೌಕರರು ಗುರುವಾರ ಬಿ.ಸಿ.ರೋಡಿನ ಶಾಸಕರ ಕಚೇರಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಮನವಿ ನೀಡಿದರು.
ಸಂಘಟನೆಯು ಹೋರಾಟವನ್ನು ತೀವ್ರಗೊಳಿಸಿದ್ದು, ಡಿ.19ರ ಮಾಡು ಇಲ್ಲವೇ ಮಡಿ ಹೋರಾಟದ ಮೊದಲು ತಾವು ರಾಜ್ಯದ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಎನ್‌ಪಿಎಸ್ ನೌಕರರ ಬಾಳಿಗೆ ಬೆಳಕಾಗಬೇಕಿದೆ. ರಾಜ್ಯದಲ್ಲಿ ಸುಮಾರು 4 ಲಕ್ಷ ಸರಕಾರಿ, ನಿಗಮಗಳ ಎನ್‌ಪಿಎಸ್ ನೌಕರರಿದ್ದು, 20 ಲಕ್ಷ ಮಂದಿ ಅವಲಂಬಿತರಿದ್ದಾರೆ. ಹೀಗಾಗಿ ನಮ್ಮೆಲ್ಲರ ಪರ ಧ್ವನಿ ಎತ್ತುವಂತೆ ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಕಾರ್ಯದರ್ಶಿ ಯತೀಶ್ ಪಿ, ಪ್ರಮುಖರಾದ ಮೆಸ್ಕಾಂ ಇಇ ಪ್ರಶಾಂತ್ ಪೈ, ಉಪತಹಸಿಲ್ದಾರ್ ರಾಜೇಶ್ ನಾಯ್ಕ್, ಶಾಸಕರ ಆಪ್ತ ಕಾರ್ಯದರ್ಶಿ ಶಿವಾನಂದ ಪೂಜಾರಿ, ಮೆಸ್ಕಾಂನ ಸಿದ್ಧರಾಜು, ನ್ಯಾಯಾಂಗ ಇಲಾಖೆಯ ರೇಣುಕಾ, ತಾ.ಪಂ.ನ ವೈಲೆಟ್, ಕಂದಾಯ ಇಲಾಖೆಯ ಸೀತಾರಾಮ ಪೂಜಾರಿ, ಶಿಕ್ಷಣ ಇಲಾಖೆಯ ಲಕ್ಷ್ಮಣ ಬೆಲೆಗದ್ದೆ, ರಿಯಾಝ್, ಸುರೇಂದ್ರ ಮೊದಲಾದವರಿದ್ದರು.
Be the first to comment on "ಎನ್.ಪಿ.ಎಸ್. ನೌಕರರ ಪರ ದನಿ ಎತ್ತುವಂತೆ ಬಂಟ್ವಾಳ ಶಾಸಕರಿಗೆ ಸಂಘ ಮನವಿ"