ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಂಗಳವಾರ ಸ್ವಾತಂತ್ರ್ಯದ ನಡಿಗೆ ಪರಿಕಲ್ಪನೆಯೊಂದಿಗೆ ಪಾದಯಾತ್ರೆ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆಯಿತು.
ಸ್ವಾತಂತ್ರ್ಯ ಸಂಗ್ರಾಮದ ನೆನಪು ಮಾಡುವ ದೃಷ್ಟಿಯಿಂದ ಕಾಂಗ್ರೆಸ್ ಈ ಯಾತ್ರೆ ನಡೆದಿದ್ದು, ದೇಶಪ್ರೇಮದ ಸಂಗೀತದೊಂದಿಗೆ ಯಾತ್ರೆ ಸಾಗಿತು. ನಾವೂರು ಗ್ರಾಮದ ಮಣಿಹಳ್ಳ ಜಂಕ್ಷನ್‌ನಲ್ಲಿ ಪಾದಯಾತ್ರೆ ಆರಂಭಗೊಂಡಿತು.
ವಿವಿಧೆಡೆ ಸಾಗಿದ ಬಳಿಕ ಕೈಕಂಬದಲ್ಲಿ ಸಮಾಪನಗೊಂಡಿತು. ಮುಖಂಡರಾದ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿದರು. ಈ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದ ಅವರು ತಿರಂಗಾ ಯಾತ್ರೆ ಜನರ ಉಳಿವಿಗಾಗಿ ನಡೆಯುತ್ತಿದ್ದು, ದೇಶದ ಉಳಿವಿಗೆ ಕಾಂಗ್ರೆಸ್ ಅಗತ್ಯ, ಕಾಂಗ್ರೆಸ್ ಸೋಲು ಎಂದರೆ ಅದು ದೇಶವಾಸಿಗಳ ಸೋಲು, ಕಾರುಣ್ಯ ಇಲ್ಲದ ನಾಯಕರು ಅಧಿಕಾರದಲ್ಲಿ ಇರಬಾರದು ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಆಶಯ ಭಾಷಣ ಮಾಡಿದರು. ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಉದಯ ಕುಮಾರ್ ಇರ್ವತ್ತೂರು ಮಾತನಾಡಿದರು.
ವಿಧಾನಪರಿಷತ್ತು ಸದಸ್ಯ ಮಂಜುನಾಥ ಭಂಡಾರಿ, ದಕ್ಷಿಣ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಮ್, ಮಮತಾ ಗಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ, ಜಿ.ಪಂ.ಮಾಜಿ ಸದಸ್ಯರಾದ ಎಂ.ಎಸ್.ಮಹಮ್ಮದ್, ಬಿ.ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್‌ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸಹಕಾರಿ ಘಟಕದ ಸಂಚಾಲಕ ಸುದರ್ಶನ್ ಜೈನ್, ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಶಕುಂತಳಾ ಶೆಟ್ಟಿ, ಈಶ್ವರ ಭಟ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ, ಲವಿನಾ ವಿಲ್ಮಾ ಮೊರಾಸ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕಲ್ಮಂಜ, ಪ್ರಮುಖರಾದ ಮಲ್ಲಿಕಾ ವಿ.ಶೆಟ್ಟಿ, ಸಂಪತ್‌ಕುಮಾರ್ ಶೆಟ್ಟಿ, ದಯಾನಂದ ಶೆಟ್ಟಿ ಅಮೈ, ವೆಂಕಪ್ಪ ಪೂಜಾರಿ, ಅರ್ಷದ್ ಸರವು, ಜೋಕಿಂ, ದೇವಪ್ಪ ಕುಲಾಲ್ ಪಂಜಿಕಲ್ಲು, ಮಹಮ್ಮದ್ ನಂದರಬೆಟ್ಟು, ಸದಾಶಿವ ಬಂಗೇರ, ಜನಾರ್ದನ ಚಂಡ್ತಿಮಾರ್, ಮಹಮ್ಮದ್ ನಂದಾವರ, ಮಧುಸೂದನ್ ಶೆಣೈ, ಸುಭಾಶ್ಚಂದ್ರ ಶೆಟ್ಟಿ ಕುಲಾಲ್, ರೋಶನ್ ರೈ, ಚಂದ್ರಶೇಖರ ಪೂಜಾರಿ, ಜಗದೀಶ್ ಕೊಯಿಲ, ವಾಸು ಪೂಜಾರಿ ಉಪಸ್ಥಿತರಿದ್ದರು.
Be the first to comment on "ಕಾಂಗ್ರೆಸ್ ನಿಂದ ರೈ ನೇತೃತ್ವದಲ್ಲಿ ಸ್ವಾತಂತ್ರ್ಯದ ನಡಿಗೆ ಪಾದಯಾತ್ರೆ, ಜನರ ಉಳಿವಿಗೆ ಕಾಂಗ್ರೆಸ್ ಅಗತ್ಯ – ಸುಧೀರ್ ಕುಮಾರ್ ಮುರೊಳ್ಳಿ"