ಮೆಸ್ಕಾಂ ನ ಬಂಟ್ವಾಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಜಾದೀ ಕಿ ಅಮೃತ್ ಮಹೋತ್ಸವ್ ಹಿನ್ನೆಲೆಯಲ್ಲಿ ವಿದ್ಯುತ್ ಕ್ಷೇತ್ರದಲ್ಲಾದ ಸಾಧನೆಗಳನ್ನು ಪರಿಚಯಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ನಾಲ್ಕು ವರ್ಷದಲ್ಲಿ 12 ಕೋಟಿ ವೆಚ್ಚದಲ್ಲಿ ಗ್ಯಾಸ್ ಇನ್ಸುಲೇಟೆಡ್ ಸ್ಟೇಶನ್, ದೀನ್ ದಯಾಳ್ ಉಪಾಧ್ಯಾಯ ಅಂತ್ಯೋದಯ ಕಾರ್ಯಕ್ರಮಕ್ಕೆ 873 ಮಂದಿಗೆ ಸಂಪರ್ಕ, ಬೆಳಕು ಯೋಜನೆಯಡಿ ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಯೋಜನೆ ಮಾಡಲಾಗಿದೆ ಎಂದವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಗ್ರಾಮದೊಳಗೆ ಕತ್ತಲಲ್ಲಿ ಇರುವ ವಿದ್ಯಾರ್ಥಿಗಳು ಇಲ್ಲದಂತೆ ನೋಡಬೇಕು. ನೀವು ಮಾಡುವ ಕೆಲಸ ಮಹತ್ವದ್ದು ಎಂದರು. ಆಜಾದೀ ಕಾ ಅಮೃತ್ ಮಹೋತ್ಸವ್ ಅರ್ಥಪೂರ್ಣ ಆಚರಣೆ ಆಗಲು ಪ್ರತಿಯೊಂದು ಮನೆಗೆ ವಿದ್ಯುದೀಕರಣ ಆಗಬೇಕು ಎಂದರು.
ಮೆಸ್ಕಾಂ ಎಂಡಿ ಪ್ರಶಾಂತ್ ಕುಮಾರ್ ಮಿಶ್ರಾ, ದ.ಕ. ಜಿಪಂ ಸಿಇಒ ಕುಮಾರ್, ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಪದ್ಮಾವತಿ ಡಿ, ನೋಡಲ್ ಆಫೀಸರ್ ಚಿತ್ತರಂಜನ್ ಕುಮಾರ್, ಬಂಟ್ವಾಳ ತಹಸೀಲ್ದಾರ್ ಡಾ.ಸ್ಮಿತಾ ರಾಮು ಉಪಸ್ಥಿತರಿದ್ದರು, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಸ್ವಾಗತಿಸಿದರು. ಮೂಡನಡುಗೋಡು ಗ್ರಾಮದ ಪಾಸ್ಕಲ್ ಡಿಸೋಜ, ವಿಠಲ ಬಾಳ್ತಿಲ, ಮಾಣಿಲ ಗ್ರಾಮದ ಕೃಷ್ಣ, ಅನಂತಾಡಿ ಗ್ರಾಮದ ಗಣೇಶ್, ಕನ್ಯಾನ ಗ್ರಾಮದ ಹರೀಶ್ ಅನಿಸಿಕೆ ವ್ಯಕ್ತಪಡಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಕೇಂದ್ರ, ರಾಜ್ಯ ಅನುದಾನದಿಂದ ಬಂಟ್ವಾಳ ಕ್ಷೇತ್ರದಲ್ಲಿ ಮೆಸ್ಕಾಂನಿಂದ ಹಲವು ವಿದ್ಯುತ್ ಯೋಜನೆ ಯಶಸ್ವಿಯಾಗಿ ಜಾರಿ: ರಾಜೇಶ್ ನಾಯ್ಕ್"