ಬಂಟ್ವಾಳ: ಬಿಜೆಪಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಮಾಡುತ್ತಿದ್ದು, ಕಾರ್ಯಕರ್ತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಪೆರಾಜೆ ಗ್ರಾಮದಲ್ಲಿ ಬೂತ್ ಅಧ್ಯಕ್ಷರುಗಳ ಮನೆ ಬೇಟಿ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೂತ್ ಅಧ್ಯಕ್ಷರಾದ ರಾಜಾರಾಮ ಕಾಡೂರು, ಪುರುಷೋತ್ತಮ ಸಾದಿಕುಕ್ಕು ಮತ್ತು ರಾಘವ ಗೌಡ ಅವರ ಮನೆಗಳಿಗೆ ಭೇಟಿ ನೀಡಿದ ಶಾಸಕರು, ನಾಮಫಲಕ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ, ಬಾಳ್ತಿಲ ಮಹಾಶಕ್ತಿಕೇಂದ್ರ ಅಧ್ಯಕ್ಷ ಮೋಹನ್ ಪಿ.ಎಸ್. ಅಶ್ವಥ್ ಬರಿಮಾರು, ಪೆರಾಜೆ ಮಹಾಶಕ್ತಿ ಕೇಂದ್ರದ ಪ್ರಭಾರಿ ಚಿದಾನಂದ ಕಲ್ಲಡ್ಕ,ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಅನಂದ ಶಂಭೂರು, ಸುಪ್ರೀತ್ ಅಳ್ವ, ಯಶೋಧರ ಕರ್ಬೆಟ್ಟು, ಸನತ್ ಕುಮಾರ್ ರೈ, ಗ್ರಾ.ಪಂ.ಸದಸ್ಯೆ ಶಶಿಕುಮಾರಿ, ಹರೀಶ್ ಶೆಟ್ಟಿ ಪಾಣೂರು, ಪ್ರಮುಖರಾದ ಬಿ.ಟಿ.ನಾರಾಯಣ ಭಟ್ , ಶ್ರೀನಿವಾಸ ಪೆರಾಜೆ ಉಪಸ್ಥಿತರಿದ್ದರು. ಉಮೇಶ್ ಸಪಲ್ಯ ಕಾರ್ಯಕ್ರಮ ನಿರೂಪಿಸಿದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…