ಕಲ್ಲಡ್ಕ

1400ಕ್ಕೂ ಅಧಿಕ ರಸ್ತೆಗಳ ಸಹಿತ ಬಂಟ್ವಾಳ ನವನಿರ್ಮಾಣ, ಕ್ಷೇತ್ರವೀಗ ಶಾಂತಿ ನೆಮ್ಮದಿಯ ತಾಣ: ರಾಜೇಶ್ ನಾಯ್ಕ್ ಉಳಿಪ್ಪಾಡಿ

ಬಂಟ್ವಾಳ ಕ್ಷೇತ್ರದಲ್ಲಿ 1400ಕ್ಕೂ ಅಧಿಕ ರಸ್ತೆಗಳ ನಿರ್ಮಾಣ ಕಾರ್ಯವನ್ನು ನಡೆಸಲಾಗಿದ್ದು, ಅಭಿವೃದ್ಧಿಯೊಂದಿಗೆ ಶಾಂತಿ, ನೆಮ್ಮದಿಯ ವಾತಾವರಣ ಕಲ್ಪಿಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ಅವರು ಶನಿವಾರ ತಾಲೂಕಿನ ಪೆರಾಜೆ ಗ್ರಾಮದ ವಿವಿಧೆಡೆ ಸುಮಾರು 1.27 ಕೋಟಿ ರೂಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು

.ಕೃಷಿಗೆ ಪೂರಕವಾಗಿ ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಾಣ, ಪ್ರತಿ ಮನೆಗೂ ಕುಡಿಯುವ ನೀರು ಯೋಜನೆ, ಆರೋಗ್ಯ, ಶಿಕ್ಷಣಕ್ಕೆ ಒತ್ತು, ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ ಮಾಡಲಾಗಿದೆ ಎಂದವರು ಹೇಳಿದರು.ಜನಸಂಘ ಕಾಲದಲ್ಲಿ ಸಂಘಟನೆ ನಡೆಸಿದ ಹಿರಿಯರಾದ ಬಿ.ಟಿ‌.ನಾರಾಯಣ ಭಟ್, ಪಕೀರ ಮೂಲ್ಯ, ಈಶ್ವರ ನಾಯ್ಕ್ ಮಿತ್ತಪೆರಾಜೆ, ಜನಾರ್ದನ ಗೌಡ, ಈಶ್ವರ ನಾಯ್ಕ್ ಸಾದಿಕುಕ್ಕು, ರಾಮಣ್ಣ ಗೌಡ ದೆಪ್ಪೊಲಿ ಅವರನ್ನು ಗೌರವಿಸಲಾಯಿತು.

ಜಾಹೀರಾತು

ಗ್ರಾಮ ಪಂಚಾಯತ್ ಸದಸ್ಯ ರಾಜಾರಾಮ್ ಕಾಡೂರು ಪ್ರಾಸ್ತಾವಿಕವಾಗಿ  ಮಾತನಾಡಿದರು. ಉಮೇಶ್ ಎಸ್. ಪಿ  ಸ್ವಾಗತಿಸಿದರು. ಯತಿರಾಜ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭ ಪೆರಾಜೆ ಗ್ರಾ.ಪಂ.ಅಧ್ಯಕ್ಷೆ  ರೋಹಿಣಿ, ಸದಸ್ಯರಾದ ಹರೀಶ್ ಶೆಟ್ಟಿ ಪಾಣೂರು, ಶಶಿಕುಮಾರಿ, ಮಮತಾ ಗೌಡ, ರಾಜಾರಾಮ್ ಕಾಡೂರು, ಕಡೇಶಿವಾಲಯ ಗ್ರಾ.ಪಂ.ಅಧ್ಯಕ್ಷ ಸುರೇಶ್ ಬನಾರಿ, ಬಿಜೆಪಿ ಪ್ರಮುಖರಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ರಮನಾಥ ರಾಯಿ, ಆನಂದ ಎ.ಶಂಭೂರು, ವಜ್ರನಾಥ ಕಲ್ಲಡ್ಕ, ಗಣೇಶ್ ರೈ ಮಾಣಿ,  ಪುರುಷೋತ್ತಮ ಶೆಟ್ಟಿ ವಾಮದಪದವು, ಮೋಹನ್ ಪಿ‌ಎಸ್., ಚಿದಾನಂದ ಕಲ್ಲಡ್ಕ, ಅಶ್ವಥ್ ಬರಿಮಾರು, ಯಶೋಧರ ಕರ್ಬೆಟ್ಟು, ಸತೀಶ್ ಶೆಟ್ಟಿಮೊಡಂಕಾಪು, ಸುಪ್ರೀತ್ ಆಳ್ವ , ಯಶೋಧರ ಕರ್ಬೆಟ್ಟು, ತನಿಯಪ್ಪ ಗೌಡ, ಸನತ್ ಕುಮಾರ್ ರೈ, ದಿವಾಕರ ಭಂಡಾರಿ ಶಂಭೂರು, ಶ್ರೀನಿವಾಸ ಪೆರಾಜೆ, ದಿವಾಕರ ಗೌಡ ಶಾಂತಿಲ,ಪಕೀರ ಮೂಲ್ಯ, ನಾರಾಯಣ ಟೈಲರ್ , ಮಾದವ ಕುಲಾಲ್, ಕೃಷ್ಣ ಭಟ್ ಮುರ್ಗಾಜೆ , ಶಿವರಾಮ್ ಭಟ್ ಕಾಡೂರು,  ನಾರಾಯಣ ಭಟ್ , ನಾರಾಯಣ ಎಂ.ಪಿ.ಪಾಲ್ಯ, ಪಿ.ಡಿ.ಒ.ಸುನಿಲ್ ,ಪ್ರಮುಖರಾದ ಪೆರಾಜೆ ಗುತ್ತು ಶ್ರೀಕಾಂತ್ ಅಳ್ವ, ಜಯರಾಮ ರೈ ಪೆರಾಜೆ ಗುತ್ತು, ಚಂದ್ರಹಾಸ ಶೆಟ್ಟಿ, ಜಯಾನಂದ ಪೆರಾಜೆ, ಪುರುಷೋತ್ತಮ ಸಾದಿಕುಕ್ಕು, ರಾಘವ ಗೌಡ, ಬಾಲಕೃಷ್ಣ ಪೆರಾಜೆ, ಯತಿರಾಜ್ ಪೆರಾಜೆ , ವಾಮನ ಪೆರಾಜೆ, ಸಂದೇಶ್ ಕುಲಾಲ್, ಲೋಕೇಶ್ ನಾಯ್ಕ್,ಮಹೇಂದ್ರ,.ಜನಾರ್ದನ ಕುಲಾಲ್, ನಾಗೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

1.27 ಕೋಟಿ ರೂ ಕಾಮಗಾರಿ: ಜೋಗಿಬೆಟ್ಟು-ಪಾಣೂರ್ ರಸ್ತೆ  30 ಲಕ್ಷ ,ಕೊಡಂಗೆ ರಸ್ತೆ 5 ಲಕ್ಷ, ಒಲಸರಿ  ದೈವಸ್ಥಾನ ರಸ್ತೆ 10 ಲಕ್ಷ, ಬಲ್ಲಮಜಲು ಕುಡೋಳು ರಸ್ತೆಕ್ಕೆ 15 ಲಕ್ಷ, ಶಾಂತಿಲ- ಬಳ್ಳಮಜಲು ರಸ್ತೆ 10 ಲಕ್ಷ, ಪಾಣೂರ್ ಮುಗ್ರೋಡಿಪಾಲ್ ರಸ್ತೆ 10 ಲಕ್ಷ , ಮಂಜೊಟ್ಟಿ ಕಾಲು ಸಂಕಕ್ಕೆ 10 ಲಕ್ಷ, ಅರ್ಬಿ ರಸ್ತೆಗೆ 3 ಲಕ್ಷ, ಜೋಗಿಬೆಟ್ಟು ಹೈಮಾಸ್ಕ್ ಲೈಟ್ 1ಲಕ್ಷ, ಶ್ರೀದೇವಿ ಭಜನಾ ಮಂದಿರದ ಹೈಮಾಸ್ಕ್ ಲೈಟ್  1.20 ಲಕ್ಷ, ಮುಗ್ರೋಡಿಪಾಲ್ ಪಾನೂರ್ ರಸ್ತೆ ಒಳಚರಂಡಿ  2 ಲಕ್ಷ,    ಶಿಲಾನ್ಯಾಸ ಕಾರ್ಯಕ್ರಮ, ಬಡೆಕೋಡಿ ಮಂಜೊಟ್ಟಿ ದೈವಸ್ಥಾನ ರಸ್ತೆ 10 ಲಕ್ಷ, ಕೊಂಕಣ ಪದವು ರಸ್ತೆ 10 ಲಕ್ಷ, ಏಣಾಜೆ ರಸ್ತೆ 10 ಲಕ್ಷ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ