FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ನಿಮ್ಮ ನಂಬರ್ ಅಪ್ಡೇಟ್ ಮಾಡುತ್ತೇನೆ ಎಂದು ಹೇಳಿ, 10 ರೂ ರೀಚಾರ್ಜ್ ಮಾಡಲು ತಿಳಿಸಿ 1.65 ಲಕ್ಷ ರೂವನ್ನು ತನ್ನ ಖಾತೆಗೆ ಅಪರಿಚಿತ ಅನಾಮಧೇಯನೊಬ್ಬ ವರ್ಗಾವಣೆ ಮಾಡಿದ ಪ್ರಕರಣವೊಂದು ನಡೆದಿದೆ. ಈ ಕುರಿತು ಮಂಗಳವಾರ ಪ್ರಕರಣ ದಾಖಲಾಗಿದೆ.
ಈ ಕುರಿತು ಬಿ.ಸಿ.ರೋಡಿನ ವೈದ್ಯ ಡಾ. ಅಶ್ವಿನ್ ಬಾಳಿಗಾ ದೂರು ನೀಡಿದ್ದು, ಅವರ ಮೊಬೈಲ್ ಗೆ ಏ.29ರಂದು ಸಂಜೆ 5.30 ಗಂಟೆಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಜಿಯೋ ನಂಬರ್ನ್ನು ಅಪ್ಡೇಟ್ ಮಾಡುವುದಾಗಿ ತಿಳಿಸಿ ಗೂಗಲ್ ಪ್ಲೇ ಸ್ಟೋರ್ನಿಂದ ಕ್ವಿಕ್ ಈಸಿ ಆಪ್ ಅನ್ನು ಡೌನ್ಲೋಡ್ ಮಾಡಿಸಿ ನಂತರ ವೈದ್ಯರ ಮೊಬೈಲ್ ನಲ್ಲಿ ಮೈ ಜಿಯೋ ಆಪ್ ನಲ್ಲಿ 10 ರೂಪಾಯಿ ರಿಚಾರ್ಜ್ ಮಾಡಲು ತಿಳಿಸಿದ್ದಾನೆ. ಅದರಂತೆ ವೈದ್ಯರು ತನ್ನ ಬ್ಯಾಂಕ್ ಎಸ್ಬಿ ಖಾತೆ ಡೆಬಿಟ್ ಕಾರ್ಡ್ ವಿವರಗಳನು ಆಪ್ ನಲ್ಲಿ ಹಾಕಿ 10 ರೂ ರಿಚಾರ್ಜ್ ಮಾಡಿರುತ್ತಾರೆ ಕೂಡಲೇ ತನ್ನ್ ಖಾತೆಯಿಂದ 10,000ದಂತೆ 3 ಬಾರಿ ಮತ್ತು ರೂ 45,000ದಂತೆ 3 ಬಾರಿ ಅಪರಿಚಿತನ ಖಾತೆಗೆ ಒಟ್ಟು ರೂ 1,65,000 ಹಣ ವರ್ಗಾವಣೆಯಾಗಿರುತ್ತದೆ. ಈ ರೀತಿಯಾಗಿ ಹಣವನ್ನು ಪಡೆದುಕೊಂಡು ವಂಚಿಸಿ ಮೋಸ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.
Be the first to comment on "10 ರೂ ರೀಚಾರ್ಜ್ ಮಾಡಲು ಹೇಳಿ 1.65 ಲಕ್ಷ ರೂ ಗುಳುಂ: ಬಿ.ಸಿ.ರೋಡಿನ ವೈದ್ಯರಿಗೆ ಮೋಸ ಮಾಡಿದ ಅನಾಮಧೇಯ"