FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ಕಾರ್ಮಿಕರ ಕಾಯ್ದೆಗಳನ್ನು ಮಾಲಕರ ಪರ ತಿದ್ದುಪಡಿ ಮಾಡುವ ಮೂಲಕ ಬದುಕನ್ನು ದುಸ್ತರಗೊಳಿಸುವ ಕಾರ್ಯವನ್ನು ಸರ್ಕಾರ ಮಾಡಿವೆ ಎಂದು ಬಂಟ್ವಾಳದಲ್ಲಿ ನಡೆದ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಎಐಟಿಯುಸಿ ಮುಖಂಡರು ಆರೋಪಿಸಿದರು.
ವಿಪರೀತ ಬೆಲೆ ಏರಿಕೆಯಿಂದ ಜೀವನ ದುಸ್ತರಗೊಂಡಿದೆ. ಈ ಸಂದರ್ಭ ಕಾನೂನು ಕಾಯ್ದೆಗಳಿಗೆ ತಿದ್ದುಪಡಿ ತಂದು ಕಾರ್ಮಿಕರನ್ನು ಬೀದಿಪಾಲು ಮಾಡಲು ಸರಕಾರ ಹೊರಟಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕವರ್ಗ ಎಚ್ಚೆತ್ತುಕೊಂಡು ಸರಕಾರಗಳಿಗೆ ಬುದ್ದಿ ಕಲಿಸಬೇಕಾಗಿದೆ. ಜನವಿರೋಧಿ ನೀತಿಗಳಿಂದ ದಿಕ್ಕು ತಪ್ಪಿಸಲು ಸರ್ಕಾರ ಹೊಸ ಯೋಜನೆ ರೂಪಿಸಿದೆ ಎಂದರು,ಅಧ್ಯಕ್ಷತೆಯನ್ನು ಎಐಟಿಯುಸಿ ತಾಲೂಕು ಮುಖಂಡ ಬಾಬು ಭಂಡಾರಿ ವಹಿಸಿದ್ದರು. ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್, ಭಾರತೀಯ ಮಹಿಳಾ ಒಕ್ಕೂಟ ದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್, ಅಖಿಲ ಭಾರತ ಯುವಜನ ಫೆಡರೇಶನ್ ಪ್ರೇಮನಾಥ ಕೆ ಮಾತನಾಡಿದರು.ಎಐಟಿಯುಸಿ ಜಿಲ್ಲಾ ಸಹಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಪ್ರಸ್ತಾವನೆ ಗೈದರು. ಎನ್ ಎಫ್ ಐ ಡಬ್ಲ್ಯೂ ನಾಯಕಿ ಕೇಶವತಿ ಸ್ವಾಗತಿಸಿ ಶಮಿತಾ ವಂದಿಸಿದರು.
Be the first to comment on "ಬಂಟ್ವಾಳದಲ್ಲಿ ಎಐಟಿಯುಸಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ"