FOR ADVERTISEMENTS PLEASE CONTACT: HARISH MAMBADY, 9448548127
ಬಂಟ್ವಾಳ: ಬಂಟ್ವಾಳ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಗುರುವಾರ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಮಹಾವೀರ ಜಯಂತಿ ಆಚರಿಸಲಾಯಿತು.
ತಹಸೀಲ್ದಾರ್ ರಶ್ಮಿ ಎಸ್ ಆರ್ ಅಧ್ಯಕ್ಷತೆ ವಹಿಸಿ ದೀಪ ಪ್ರಜ್ವಲಿಸಿ ಅಹಿಂಸೆಯೇ ಪರಮ ಧರ್ಮ ಎಂದು ಮಹಾವೀರರು ಸಾರಿದ್ದಾರೆ. ಈ ಅಹಿಂಸೆಯ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪ್ರಪಂಚವೇ ಶಾಂತಿ ಮತ್ತು ನೆಮ್ಮದಿಯಿಂದ ತುಂಬಿರುತ್ತದೆ ಎಂದು ಹೇಳಿದರು. ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಮಾತನಾಡಿ ತ್ಯಾಗದಿಂದ ಸುಖ, ಅಹಿಂಸೆಯಿಂದ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು. ಹಿರಿಯರಾದ ಪಟ್ಟಾಜೆ ಜಿನರಾಜ ಅರಿಗ, ವಿಜಯಕುಮಾರಿ ಇಂದ್ರ, ಮನ್ಮಥರಾಜ ಕಾಜವ, ಮದುಶ್ರೀ ಜೀತೇಶ್, ಸನ್ಮತಿ ಜಯಕೀರ್ತಿ, ಹೇಮಂತ್ ಜೈನ್,ಹರ್ಷರಾಜ್ ಬಲ್ಲಾಳ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕರಾದ ವಿಜಯ್ ಆರ್, ಸಂತೋಷ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಹಾಜರಿದ್ದರು. ಉಪತಹಸೀಲ್ದಾರ್ ದಿವಾಕರ ಮುಗುಳಿಯ ಸ್ವಾಗತಿಸಿ ಗ್ರಾಮ ಲೆಕ್ಕಾಧಿಕಾರಿ ಕುಮಾರ್ ಟಿ.ಸಿ ವಂದಿಸಿದರು.
Be the first to comment on "ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಮಹಾವೀರ ಜಯಂತಿ ಆಚರಣೆ"