ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಗಬೆಟ್ಟು ಗ್ರಾಮ ಪಂಚಾಯತ್ಗೆ ಒಳಪಟ್ಟಂತೆ ನಮ್ಮ ನಡೆ, ಬೂತ್ ಕಡೆ ಕಾರ್ಯಕ್ರಮ ನಡೆಯಿತು.
ಮಾಜಿ ಸಚಿವ ತೆಂಗಿನ ಸೆಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೂತ್ ಸಮಿತಿ ಅಧ್ಯಕ್ಷರುಗಳಾದ ವಾಮನ್ ಬುನ್ನನ್ , ದಾಮೋದರ್ ನಾಯಕ್, ಜಯಕರ್ ಶೆಟ್ಟಿ, ಅಶೋಕ್ ಪೂಜಾರಿ, ಹಮೀದ್ ಎಸ್ ಎ, ದೇವರಾಜ್ ಸಾಲ್ಯಾನ್ ಇವರ ನಿವಾಸದಲ್ಲಿ ತೆಂಗಿನ ಸಸಿಯನ್ನು ನೆಟ್ಟ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಒಂದು ಕಲ್ಪವೃಕ್ಷದಂತೆ ಬುಡದಿಂದ ಗರಿ ತನಕ ಯಾವ ರೀತಿ ಅದು ಸದುಪಯೋಗಕ್ಕೆ ಬರುತ್ತದೊ ಅದೇ ರೀತಿ ಕಾಂಗ್ರೆಸ್ ಪಕ್ಷ ಕೂಡ ಎಲ್ಲಾ ಜಾತಿ, ಧರ್ಮ, ಭಾಷೆಯ ಜನರಿಗೆ ಹಾಗೂ ಮುಖ್ಯವಾಗಿ ಬಡವರಿಗೆ ಸಹಕಾರ ಮಾಡುವಂತಹ ಬಲಿಷ್ಠ ಪಕ್ಷವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮಾತನಾಡಿ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪಪ್ರಚಾರಗಳಿಗೆ ಪ್ರತ್ಯುತ್ತರ ಕೊಡುವ ಮುಖಂತರ ಬೂತ್ ಮಟ್ಟದಿಂದಲೇ ಪಕ್ಷವನ್ನು ಬಲಪಡಿಸೋಣ ಎಂದರು. ಈ ಸಂದರ್ಭದಲ್ಲಿ ಸಂಗಬೆಟ್ಟು ವಲಯ ಕಾಂಗ್ರೆಸ್ ಅಧ್ಯಕ್ಷರಾದ ದಿನೇಶ್ ಶೆಟ್ಟಿಗಾರ್, ಕರ್ಪೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಗಣೇಶ್ ನಾಯಕ್, ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್,ಚಂದ್ರಪ್ರಕಾಶ್ ಶೆಟ್ಟಿ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲವೀನಾ ವಿಲ್ಮ ಮೋರಸ್, ಮುಖಂಡರಾದ ಡಾ.ಪ್ರಭಾ ಚಂದ್ರ, ಗೋಪಾಲ ಬಂಗೇರಾ, ರಮೇಶ್ ನಾಯಕ್ ರಾಯಿ, ಜಗದೀಶ್ ಕೊಯಿಲ,ಸುಧಾಕರ್ ಶೆಣೈ, ಸದಾನಂದ ಶೆಟ್ಟಿ ಕಾವಳಕಟ್ಟೆ, ದೇವಪ್ಪ ಕರ್ಕೇರಾ, ಶೇಖರ್ ನಾಯ್ಕ್, ಶಶಿಧರ್ ಪೂಜಾರಿ, ದಾಮೋದರ ಪೂಜಾರಿ, ಸುಭಾಶಿನಿ, ಸದಾಶಿವ ಪೂಜಾರಿ, ಸುರೇಂದ್ರ ಪೂಜಾರಿ, ಶಿವಾನಂದ ರೈ, ಅಶೋಕ್ ಆಚಾರಿ, ರವೀಂದ್ರ ಪ್ರಭು, ಜಲಜ ಪೂಜಾರಿ, ಮೊಹಮ್ಮದ್ ಶರೀಫ್, ಫಾರುಕ್ ಕೆರೆಬಳಿ, ಸೀತಾರಾಮ ಶೆಟ್ಟಿ, ರಾಜೇಶ್ ಪೂಜಾರಿ, ಅಣ್ಣಿ ಪೂಜಾರಿ, ಗಣೇಶ್ ಸಾಲ್ಯಾನ್, ದಾಮೋದರ್ ಪೂಜಾರಿ ಮಂಚಕಲ್ಲು, ಮೊಹಮ್ಮದ್ ಝೂಬಿ, ನರ್ಮದಾ ನಾಯಕ್, ಮೋನಾಕ ಕಲ್ಕುರಿ, ಫಾರೂಕ್ ಕಲ್ಕುರಿ ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment on "ಸಂಗಬೆಟ್ಟು ಗ್ರಾಮ: ಕಾಂಗ್ರೆಸ್ ಪಕ್ಷದಿಂದ ನಮ್ಮ ನಡೆ ಬೂತ್ ಕಡೆ ಕಾರ್ಯಕ್ರಮ, ಮಾಜಿ ಸಚಿವ ರೈ ಅವರಿಂದ ಚಾಲನೆ"