




ಬಂಟ್ವಾಳ: ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಂಡು ಮೂರು ವರ್ಷಗಳು ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಆರೋಗ್ಯ ಮಂಥನ ಮತ್ತು ಆಯುಷ್ಮಾನ್ ರತ್ನ ಕಾರ್ಯಚಟುವಟಿಕೆ, ಆಯುಷ್ಮಾನ್ ದಿವಸ ಆಚರಣೆ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು.ಜಾಥಾಕ್ಕೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ ಎನ್. ಚಾಲನೆ ನೀಡಿ ಶುಭ ಹಾರೈಸಿದರು. ಇದೇ ವೇಳೆ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ, ಆರೋಗ್ಯ ತಪಾಸಣೆ ನಡೆಯಿತು. ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ ಎಆರ್ಕೆ ಸ್ಯಾಂಪ್ಕೊ ಡಾ. ಪ್ರದೀಪ್ ಪೂಜಾರಿ, ಸಹಾಯಕಆಡಳಿತಾಧಿಕಾರಿ ಅನಿತ ಸತ್ಯನ್, ಎಲ್ಲಾವೈದ್ಯಾಧಿಕಾರಿಹಾಗೂ ಆರೋಗ್ಯ ಮಿತ್ರ ಉಷಾ, ಕ್ಲೇಮ್ ಎಕ್ಸಿಕ್ಯೂಟಿವ್ ಗೀತಾ ಐಶ್ವರ್ಯ, ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು
Be the first to comment on "ಬಂಟ್ವಾಳದಲ್ಲಿ ಆಯುಷ್ಮಾನ್ ದಿವಸ್ ಆಚರಣೆ"