




ಮಂಗಳೂರು: ನಿಫಾ ಸೋಂಕು ತಗಲಿರುವ ಶಂಕೆ ಮೇರೆಗೆ ಪರೀಕ್ಷೆಗೊಳಗಾಗಿದ್ದ ಯುವಕನ ವರದಿಯು ಆರೋಗ್ಯ ಇಲಾಖೆಯ ಕೈ ಸೇರಿದ್ದು, ವರದಿಯು ನೆಗೆಟಿವ್ ಆಗಿರುವುದಾಗಿ ದಕ್ಷಿಣ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.ಈ ಮೂಲಕ ಕೇರಳ ರಾಜ್ಯದಿಂದ ಕರ್ನಾಟಕಕ್ಕೂ ನಿಫಾ ವೈರಸ್ ಕಾಲಿಟ್ಟಿರುವ ಆತಂಕ ಸದ್ಯಕ್ಕೆ ದೂರವಾಗಿದೆ.ಎರಡು ದಿನಗಳ ಹಿಂದಷ್ಟೇ ನಿಫಾ ವೈರಸ್ ಸೋಂಕಿನ ಪತ್ತೆಗಾಗಿ ನಡೆಸುವ ಪರೀಕ್ಷೆಗೆ ಒಳಪಟ್ಟಿದ್ದರು.

Be the first to comment on "*ನಿಫಾ* ಆತಂಕಿತ ಯುವಕನ ವರದಿ ನೆಗೆಟಿವ್"