





ಬಂಟ್ವಾಳ: ಹಿರಿಯ ವಿದ್ಯಾರ್ಥಿ ಸಂಘ ಕುದ್ರೆಬೆಟ್ಟು ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ ನಡೆಯಿತು. ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀರಾಮ ವಿದ್ಯಾಕೇಂದ್ರದ ಶಿಕ್ಷಕರಾದ ಜಿನ್ನಪ್ಪಎಳ್ತಿಮಾರ್, ಗೋಳ್ತಮಜಲು ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾರಾಯಣ ಗೌಡ ಮತ್ತು,ಕುದ್ರೆಬೆಟ್ಟು ಶಾಲಾ ಸಹಶಿಕ್ಷಕಿ ಮಮತಾ ಟೀಚರ್, ಅತಿಥಿ ಶಿಕ್ಷಕಿಯರಾದ ರೇಖಾ ನೆಟ್ಲ ,ಬಬಿತಾ ಪ್ರಶಾಂತ್, ಅಂಗನವಾಡಿ ಶಿಕ್ಷಕಿ ಸುರೇಖಾ ಟೀಚರ್, ಸಹಾಯಕಿ ಜಯಂತಿ ಅವರಿಗೆ ಸ್ಮರಣಿಕೆ ನೀಡಿ ಗುರುನಮನ ಸಲ್ಲಿಸಲಾಯಿತು. ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚೇತನಾ ಟೀಚರ್ ಅವರನ್ನು ಸ್ಮರಣಿಕೆ ನೀಡಿ ಗುರುನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದೈವದ ಸೇವೆ ಮಾಡುವ ಕೃಷ್ಣಪ್ಪ ಪೂಜಾರಿ ಬೋಲ್ಪೊಡಿ , ಹಿರಿಯರಾದ ಶೇಖರ್ ಸಾಲಿಯಾನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಮೇಶ್. ಕೆ, ಹಿರಿಯ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಸುಂದರ ಪಾದೆ, ಪ್ರಧಾನ ಕಾರ್ಯದರ್ಶಿ ಪುರಂದರ ದಾಸಕೊಡಿ, ರವಿ ಸುವರ್ಣಬೈಲು ,ನಿತಿನ್ ಕುಮಾರ್, ಸನತ್ ಕುಮಾರ್, ಪ್ರಕಾಶ್, ನಿತಿನ್ ಮಿತ್ತಬೈಲು, ಸಂತೋಷ್ ಕುಮಾರ್ ಬೊಳ್ಪೋಡಿ , ಸುಲತ ಶಶಿ ಉಪಸ್ಥಿತರಿದ್ದರು ಪೂಜಾ ಮತ್ತು ಕುಶಿ ಪ್ರೇರಣ ಗೀತೆಯೊಂದಿಗೆ ಹಿರಿಯ ವಿದ್ಯಾ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಸ್ವಾಗತಿಸಿ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿವರಾಜ್ ವಂದಿಸಿದರು.

Be the first to comment on "ಕುದ್ರೆಬೆಟ್ಟುವಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶಿಕ್ಷಕರ ದಿನಾಚರಣೆ"