ಬಂಟ್ವಾಳ: ಬಂಟ್ವಾಳ ತಾಲೂಕು ಮಟ್ಟದಲ್ಲಿ ಗೋರಕ್ಷಣೆಯ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಗೋಶಾಲೆ ನಿರ್ಮಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಕಲ್ಲಡ್ಕದಲ್ಲಿ ಮನವಿ ಸಲ್ಲಿಸಲಾಯಿತು.
ವಿಶ್ವ ಹಿಂದು ಪರಿಷತ್ತು, ಬಜರಂಗದಳದ ಕಲ್ಲಡ್ಕ ವಲಯದ ವತಿಯಿಂದ ಈ ಮನವಿಯಲ್ಲಿ ಸಲ್ಲಿಸಲಾಗಿದ್ದು, ತಾಲೂಕು ಮಟ್ಟದಲ್ಲಿ ಸರಿಯಾದ ಗೋಶಾಲೆ ಇಲ್ಲದೆ ಗೋರಕ್ಷಣೆಯ ಬಗ್ಗೆ ಸಮಸ್ಯೆಯಾಗಿದೆ, ಈ ನಿಟ್ಟಿನಲ್ಲಿ ಶಾಸಕರು ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದ ನಿಯೋಗ, ಗೋಶಾಲೆ ಮಂಜೂರು ಮಾಡಿಸಿ, ಸರ್ಕಾರದ ವತಿಯಿಂದ ಗೋಶಾಲೆ ನಿರ್ಮಿಸಲು ಮುಂದಾಗಬೇಕು ಎಂದು ಹೇಳಿದೆ. ನಿಯೋಗದಲ್ಲಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿಗಾರ್ ಕಲ್ಲಡ್ಕ, ಕಾರ್ಯದರ್ಶಿ ನವೀನ್ ಕಲ್ಲಡ್ಕ, ಸಂಚಾಲಕ ಮೋಹನದಾಸ್ ಕಲ್ಲಡ್ಕ, ಸುರಕ್ಷಾ ಪ್ರಮುಖ್ ಶ್ರೀಕಾಂತ ಕಲ್ಲಡ್ಕ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…