ಕಲ್ಲಡ್ಕ ಶ್ರೀರಾಮ ಮಂದಿರದ 94ನೇ ವರ್ಷದ ಮೊಸರು ಕುಡಿಕೆ ಉತ್ಸವ ಶನಿವಾರ ಸಂಭ್ರಮದಿಂದ ನಡೆಯಿತು.
ಶ್ರೀರಾಮಾಂಜನೇಯ ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ. ಕೆ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಮೊಸರು ಕುಡಿಕೆ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ, ಶ್ರೀರಾಮ ಮಂದಿರ ಆಡಳಿತ ಸಮಿತಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಕಾರ್ಯದರ್ಶಿ ಕ. ಕೃಷ್ಣಪ್ಪ, ಉತ್ಸವ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಗಾರ್, ಕಾರ್ಯದರ್ಶಿ ಸುಜಿತ್ ಕೊಟ್ಟಾರಿ, ಶ್ರೀರಾಮ ಭಜನಾ ಮಂದಿರದ ಭಜನಾ ಸಮಿತಿ ಅಧ್ಯಕ್ಷ ಹರೀಶ್ ಆಚಾರ್ಯ, ಕಾರ್ಯದರ್ಶಿ ಉತ್ತಮ ಕುಮಾರ್ ಪಳನೀರು ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.
ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳು ರಾಧೆ-ಕೃಷ್ಣ ವೇಷಧರಿಸಿ ತಾಯಂದಿರೊಂದಿಗೆ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷ ಆಕರ್ಷಣೆಯಾಗಿತ್ತು. ಕೃಷ್ಣದೇವರ ಪಲ್ಲಕ್ಕಿಯ ಮುಂಭಾಗದಲ್ಲಿ ಶಿಲ್ಪ ಗೊಂಬೆ ಬಳಗ, ಡೊಳ್ಳು ಕುಣಿತ, ಭಜನೆ, ಬ್ಯಾಂಡ್, ವಿವಿಧ ವಾದ್ಯಮೇಳ, ನಾಸಿಕ್ ಬ್ಯಾಂಡ್, ಭಾರತ ಮಾತೆಯ ರೂಪಕ ಹಾಗೂ ವಿವಿಧ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು.
ನೇತಾಜಿ ಯುವಕ ಮಂಡಲ, ಶಿಲ್ಪ ಗೊಂಬೆ ಬಳಗ, 26ನೇ ವರ್ಷದ ಓಂಶಕ್ತಿ ಫ್ರೆಂಡ್ಸ್, 18ನೇ ವರ್ಷದ ತ್ರಿಶೂಲ್ ಫ್ರೆಂಡ್ಸ್ ರಾಯಪ್ಪಕೋಡಿ, 32ನೇ ವರ್ಷದ ಮಣಿಕಂಠ ಯುವಶಕ್ತಿ ಕುದ್ರಬೆಟ್ಟು ಹಾಗೂ 13ನೇ ವರ್ಷದ ವಿಶ್ವ ಹಿಂದೂ ಪರಿಷತ್ ಕಲ್ಲಡ್ಕ ಪ್ರಖಂಡ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡವು.
ಮಡಿಕೆಕಟ್ಟಿ ಶೋಭಾಯಾತ್ರೆಗೆ ಶ್ರೀರಾಮ ರಿಕ್ಷಾ ಪಾರ್ಕ್ ಮೇಲಿನ ಪೇಟೆ, ಕೋಟಿ ಚೆನ್ನಯ್ಯ ರಿಕ್ಷಾ ಪಾರ್ಕ್, ನಿಟಿಲಾಕ್ಷ ರಿಕ್ಷಾ ಪಾರ್ಕ್, ಓಂಶಕ್ತಿ ಫ್ರೆಂಡ್ಸ್, ಚಕ್ರವರ್ತಿ ಫ್ರೆಂಡ್ಸ್ ಕಲ್ಲಡ್ಕ, ವಜ್ರಕಾಯ ಫ್ರೆಂಡ್ಸ್ ಕಲ್ಲಡ್ಕ ಹಾಗೂ ರಾಮನಗರ ಬಾಯ್ಸ್ ಸೇರಿದಂತೆ ವಿವಿಧ ಸಂಘಟನೆಗಳು ಸಹಕಾರ ನೀಡಿದವು. ಹಲವು ವರ್ಷಗಳಿಂದ ಮಡಿಕೆ ಒಡೆಯುವ ಕಾರ್ಯಕ್ರಮದಲ್ಲಿ ಸಹಕರಿಸುತ್ತಿರುವ ಬೊಂಡಾಲದ ಉತ್ಸಾಹಿ ತರುಣವೃಂದವೂ ಭಾಗವಹಿಸಿತು.
ಶೋಭಾಯಾತ್ರೆಯಲ್ಲಿ ಪಾಲ್ಗೊಂಡವರಿಗೆ ನಾಗಸುಜ್ಞಾನ ಫ್ರೆಂಡ್ಸ್ ಹಾಗೂ ತುಡಾರ್ ಫ್ರೆಂಡ್ಸ್ ಕೊಳಕೀರು ವತಿಯಿಂದ ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.
ಉತ್ಸವದ ಅಂಗವಾಗಿ ಹಿಂದಿನ ದಿನ ‘ವಿಶ್ವರೂಪದರ್ಶನ’ ತಾಳಮದ್ದಲೆ ಕಾರ್ಯಕ್ರಮವು ಶ್ರೀರಾಮ ಪ್ರಸಾದಿತ ಯಕ್ಷಗಾನ ಮಂಡಳಿಯ ವತಿಯಿಂದ ನಡೆಯಿತು.