





ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಬಂಡಾರಿಬೆಟ್ಟು, ಎಂಬಲ್ಲಿಯ ಯಶವಂತ ವ್ಯಾಯಾಮ ಶಾಲೆಯ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ಆಚರಿಸಲಾಯಿತು, ರೋಟರಿ ಕ್ಲಬ್ ಬಂಟ್ವಾಳ ಟೌನ್ ಎಕ್ಸಿಕ್ಯೂಟಿವ್ ಸೆಕ್ರೆಟರಿ ಕಿಶೋರ್ ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಹೆನ್ರಿ ಪಿರೇರಾ, ಕಾರ್ಯದರ್ಶಿ ಜಗದೀಶ್, ಶಿಕ್ಷಕಿ ಭವ್ಯ, ಸ್ಥಳೀಯರಾದ ನಾರಾಯಣ್ ಮೂಲ್ಯ, ರಘುನಾಥ್ ಸಾಲಿಯಾನ್, ಡೊಂಬಯ್ಯ ಹಿರಿಯರಾದ ಕೊರಗಪ್ಪ ಮೆಸ್ತ್ರಿ ,ನೋಣಯ್ಯ, ಜಶ್ಮಿ ಕಿಶೋರ್ ಮುಂತಾದವರು ಭಾಗಿಯಾಗಿದ್ದರು.
Be the first to comment on "ಭಂಡಾರಬೆಟ್ಟು ಯಶವಂತ ವ್ಯಾಯಾಮ ಶಾಲೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ"