




ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘದಡಿಯಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯು ಸಿ.ಬಿ.ಎಸ್.ಇ ೨೦೨೦-೨೧ನೇ ಸಾಲಿನ ೧೦ನೇ ತರಗತಿ ಪರೀಕ್ಷೆಯಲ್ಲಿ ಸತತ 10ನೇ ಬಾರಿ ಶೇ.100 ಫಲಿತಾಂಶವನ್ನು ದಾಖಲಿಸಿದೆ. ತರಗತಿಯಲ್ಲಿರುವ 37 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ನವ್ಯಾ.ಜಿ.ಎನ್ ಮತ್ತು ಬಿ.ಶ್ರೇಯಸ್ ಶೆಣೈ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ ಎಂದು ಪ್ರಿನ್ಸಿಪಾಲ್ ರಮಾ ಶಂಕರ್ ಸಿ ತಿಳಿಸಿದ್ದಾರೆ. ನವ್ಯಾ ಜಿ.ಎನ್, ಶ್ರೇಯಸ್ ಶೆಣೈ, ಮನಸ್ವಿನಿ ರಾವ್, ಆದ್ಯಾ ಬನ್ನಿಂತಾಯ, ಭಾವನಾ ಹೊಳ್ಳ, ಆದೀಶ್ ಇಂದ್ರ, ವರ್ಷಿಣಿ ಮಯ್ಯ, ಅದಿತಿ ಶೆಟ್ಟಿ, ವಿನಿತ್ ಮ್ಯಾಕ್ಸಿನ್ ಮೆನೆಜಸ್, ಬಿ.ನಿಧಿ ಬಾಳಿಗಾ ಮತ್ತು ಶಾರ್ವರಿ ರಾವ್ ಅತ್ಯುತ್ತಮ ಅಂಕ ಗಳಿಸಿದವರು.
Be the first to comment on "ಸಿಬಿಎಸ್ ಸಿ: ಬಿ.ಆರ್.ಎಂ.ಪಿ.ಗೆ ಶೇ.100 ಫಲಿತಾಂಶ"