ಸಜಿಪಮುನ್ನೂರು ಗ್ರಾಮದಲ್ಲಿ ಇಂದಿರಾ ಕ್ಷೇಮ ನಿಧಿಯಿಂದ ಆಹಾರ ಸಾಮಗ್ರಿ ವಿತರಣೆ
ಬಂಟ್ವಾಳ: ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ಸೇವೆಗೆ ಬದ್ಧರಾಗಿ ಕಾಂಗ್ರೆಸ್ ಕಾರ್ಯಕರ್ತರು ಇಚ್ಛಾಶಕ್ತಿಯಿಂದ ಜನರ ನಡುವೆ ಕೆಲಸ ಮಾಡುತ್ತಿರುವುದು ಗಮನಾರ್ಹ, ಸಮಾಜಸೇವೆಯನ್ನು ಕಾಂಗ್ರೆಸ್ ಅರ್ಥಪೂರ್ಣವಾಗಿ ಮಾಡುತ್ತಿದ್ದು, ಕಾರ್ಯಕರ್ತರು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು.
ತಾಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿ-ಶಾರದಾನಗರದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದಿರಾ ಕ್ಷೇಮ ನಿಧಿಯ ವತಿಯಿಂದ ಕೋವಿಡ್ ಪಾಸಿಟಿವ್ ಬಂದ ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ವಿಶೇಷ ಕಾರ್ಯಕ್ರಮ ದಲ್ಲಿ ಭಾಗವಹಿಸು ಅವರು ಮಾತನಾಡಿದರು.
ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ, ತಾ ಪಂ ಮಾಜಿ ಸದಸ್ಯ ಶರೀಫ್ ಆಲಾಡಿ, ಸಜಿಪಮುನ್ನೂರು ಗ್ರಾ ಪಂ ಮಾಜಿ ಸದಸ್ಯ ಕಬೀರ್ ಗಡಿಯಾರ, ಎಸ್ಕೆಎಸ್ಸೆಸ್ಸೆಫ್ ಆಲಾಡಿ ಘಟಕಾಧ್ಯಕ್ಷ ಹಕೀಂ ಆಲಾಡಿ, ಮಲಾಯಿಬೆಟ್ಟು ಘಟಕಾಧ್ಯಕ್ಷ ಇಕ್ಬಾಲ್ ಪಡ್ಪು, ಸಜಿಪ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಮಜಲ್ಪಾದೆ, ಆಲಾಡಿ ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಯೂಸುಫ್ ಆಲಾಡಿ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಎಡ್ಮಿನ್ ಇಬ್ರಾಹಿಂ ಮಲಾಯಿಬೆಟ್ಟು, ಪ್ರಮುಖರಾದ ಮನೋಹರ ಶಾರದಾನಗರ, ಕರೀಂ ತನ್ನಚ್ಚಿಲ್, ನೌಶಾದ್ ತನ್ನಚ್ಚಿಲ್, ರಫೀಕ್ ಕರಂದಾಡಿ, ಇಬ್ರಾಹಿಂ ಮುಸ್ಲಿಯಾರ್ ಆಲಾಡಿ, ಅಬೂಬಕ್ಕರ್ ಶಾರದಾನಗರ, ಇಬ್ರಾಹಿಂ ಯಾನೆ ಮೋನು ಶಾರದಾನಗರ, ಅಶ್ರಫ್ ಶಾರದಾನಗರ, ಅಬ್ದುಲ್ ಖಾದರ್ ತನ್ನಚ್ಚಿಲ್, ಅಬ್ದುಲ್ ಅಝೀಝ್ ನಂದಾವರ-ಕೊಪ್ಪಳ, ರಹಿಮಾನ್ ಉದ್ದೊಟ್ಟು ಮೊದಲಾದವರು ಭಾಗವಹಿಸಿದ್ದರು.
Be the first to comment on "ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ಸೇವೆಗೆ ಬದ್ಧರಾಗಿ ಕಾಂಗ್ರೆಸ್ ಕಾರ್ಯಕರ್ತರ ಕೆಲಸ – ಮಾಜಿ ಸಚಿವ ಬಿ.ರಮಾನಾಥ ರೈ"