


ಬಂಟ್ವಾಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ 7ನೇ ವರ್ಷಾಚರಣೆಯ ಸಂಭ್ರಮವಾಗಿ ಭಾನುವಾರ ಬೆಳಗ್ಗೆ ಪುರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ಪೇಟೆ ಬಿಜೆಪಿ ಬೂತ್ ಸಮಿತಿ ವತಿಯಿಂದ ಅಧ್ಯಕ್ಷ ಕೆ.ಸದಾಶಿವ ಪ್ರಭು ನೇತೃತ್ವದಲ್ಲಿ ಬಂಟ್ವಾಳ ಪುರಸಭೆಯ ಪೌರಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು. ಪುರಸಭೆ ಸದಸ್ಯೆ ಶಶಿಕಲಾ, ಪ್ರಮುಖರಾದ ಗಿರಿಧರ ಬಾಳಿಗಾ, ಸಂತೋಷ್ ದೇವಾಡಿಗ, ಸತೀಶ್ ನಾಯಕ್, ವೆಂಕಟ್ರಮಣ ಆಚಾರ್ಯ, ಅರಳ ರಾಮಪ್ರಸಾದ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು. ಒಟ್ಟು 52 ಮಂದಿ ಪೌರಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು.
Be the first to comment on "ಬಂಟ್ವಾಳ ಪೇಟೆ ಬೂತ್ ಸಮಿತಿ ವತಿಯಿಂದ ಪೌರಕಾರ್ಮಿಕರಿಗೆ ಕಿಟ್ ವಿತರಣೆ"