ಪಿಲಾತಬೆಟ್ಟು: 21 ಮಂದಿ ಕೊರೊನಾ ಸೋಂಕಿತರು ಇರುವ ಪಿಲಾತಬೆಟ್ಟು ಗ್ರಾಪಂನ ಟಾಸ್ಕ್ ಫೋರ್ಸ್ ಸಭೆಯನ್ನು ಮಂಗಳವಾರ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ನಡೆಸಲಾಯಿತು. ಕೊರೊನಾ ನಿಯಂತ್ರಣಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕೆ ವಿನಹ: ವ್ಯವಸ್ಥೆ ಗಳ ಬಗ್ಗೆ ವಿನಾಕಾರಣ ಆರೋಪ ಪ್ರತ್ಯಾರೋಪಗಳ ಮೂಲಕ ಸಮಯ ವ್ಯರ್ಥ ಮಾಡಬೇಡಿ ಎಂದು ಈ ಸಂದರ್ಭ ಶಾಸಕರು ಸಲಹೆ ನೀಡಿದರು.
21 ಮಂದಿ ಕೊರೊನಾ ಸೊಂಕಿತರು ಇದ್ದು ಅದರಲ್ಲಿ ಓರ್ವ ವ್ಯಕ್ತಿಯ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದಂತೆ 20 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ಪಿಡಿಒ ರಾಜಶೇಖರ ರೈ ನೀಡಿದರು.
ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿಪುಪ್ಷಾನಂದ, ಉಪಾಧ್ಯಕ್ಷ ಲಕ್ಮೀನಾರಾಯಣ ಹೆಗ್ಡೆ, ತಹಶಿಲ್ದಾರ್ ರಶ್ಮಿ ಎಸ್ ಆರ್, ತಾ.ಪಂ.ಇ.ಒ.ರಾಜಣ್ಣ, ಪಿ.ಡಿ.ಒ.ರಾಜಶೇಖರ್ ರೈ, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ.ಸೋಹನ್ ಕುಮಾರ್ ಇದ್ದರು.
Be the first to comment on "ಪಿಲಾತಬೆಟ್ಟು ಗ್ರಾಪಂನಲ್ಲಿ 21 ಮಂದಿಗೆ ಕೊರೊನಾ ಸೋಂಕು: ತಡೆಗಟ್ಟಲು ನಿಯಮ ಪಾಲಿಸಿ – ಶಾಸಕ ರಾಜೇಶ್ ನಾಯ್ಕ್"