


ಬಂಟ್ವಾಳ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಪಥ ನಮಗೆ ಆದರ್ಶವಾಗಲಿ, ಅವರು ತನ್ನ ಬದುಕಿನುದ್ದಕ್ಕೂ ನಡೆಸಿದ ಹೋರಾಟಗಳು ನಮಗೆ ಪ್ರೇರಣೆಯಾಗಲಿ ಎಂದು ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಸಂದೇಶ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ಒದಗಿಸಿ, ಸಾಮಾಜಿಕ ನ್ಯಾಯವನ್ನು ನೀಡಲು ಶ್ರಮಿಸಿದವರು. ಶಿಕ್ಷಣ, ಮಹಿಳೆಯರ ಹಕ್ಕುಗಳು, ಸಮಾನತೆ, ಅಭಿವೃದ್ಧಿಯ ದೂರದೃಷ್ಟಿ ಅವರಲ್ಲಿತ್ತು. ಇಂದು ಜಗತ್ತೇ ನೋಡುವಂತೆ ಮಾಡಿದ ವ್ಯಕ್ತಿತ್ವ ಅಂಬೇಡ್ಕರ್ ಅವರದ್ದಾಗಿದೆ ಎಂದು ಶರೀಫ್ ಹೇಳಿದ್ದಾರೆ.
Be the first to comment on "ಅಂಬೇಡ್ಕರ್ ಜೀವನ ನಮಗೆ ಆದರ್ಶವಾಗಲಿ: ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್"