



ಬಂಟ್ವಾಳ: ಮೆಸ್ಕಾಂ ಅಧಿಕಾರಿ, ನೌಕರರು ಬಂಟ್ವಾಳ ವಿಭಾಗ ವತಿಯಿಂದ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ ಮೆಸ್ಕಾಂ ಬಂಟ್ವಾಳ ಕಚೇರಿಯಲ್ಲಿ ನಡೆಯಲಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ರಕ್ತದಾನ ಮಾಡಬಹುದಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಕೆಎಂಸಿ ಅತ್ತಾವರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯುವುದು. ಕಾರ್ಯಕ್ರಮವನ್ನು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಉದ್ಘಾಟಿಸುವರು. ಅತಿಥಿಗಳಾಗಿ ಎಇಇಗಳಾದ ನಾರಾಯಣ ಭಟ್, ಪ್ರಶಾಂತ್ ಪೈ, ಶಿವಶಂಕರ್, ಪ್ರವೀಣ್ ಜೋಷಿ, ಭವತಾರಿಣಿ, ಲೆಕ್ಕಾಧಿಕಾರಿ ಅನ್ನಪೂರ್ಣ, ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣಕುಮಾರ ಪೂಂಜಾ, ಲೆಕ್ಕಾಧಿಕಾರಿ ಚಂದ್ರಶೇಖರ್, ನೌಕರರ ಸಂಘದ ಶಂಕರ ಪ್ರಕಾಶ್, ದಿನೇಶ್ ಭಾಗವಹಿಸುವರು.
Be the first to comment on "ಅಂಬೇಡ್ಕರ್ ಜಯಂತಿ ಹಿನ್ನೆಲೆ: ಮೆಸ್ಕಾಂನಲ್ಲಿ 14ರಂದು ರಕ್ತದಾನ ಶಿಬಿರ"