ಬಂಟ್ವಾಳ: ಯುವವಾಹಿನಿಯ ಮಾಣಿ ಘಟಕ ಮತ್ತು ಮಾಣಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಹಯೋಗದಲ್ಲಿ ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಳೆಯ ಬೆಳಕು ಮಹಿಳೆ ಮಾ ತುಜೇ ಸಲಾಂ ಪ್ರಸ್ತುತಿ, ಸಂವಾದ ಕಾರ್ಯಕ್ರಮ ನಡೆಯಿತು.
ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕಿ ಸಂಧ್ಯಾ ಕುಳಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ., ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಸುರೇಶ್ ಸೂರ್ಯ, ಬಂಟ್ವಾಳ ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ ಜಯಲಕ್ಷ್ಮಿ ಪಚ್ಚಿನಡ್ಕ, ಮಾಣಿ ಬಿಲ್ಲವ ಸಂಘದ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ವಸಂತಿ ಸಂಜೀವ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಜನಾರ್ದನ ಬಿ.ಎಲ್., ಕಲೆ,ಸಾಹಿತ್ಯ, ಸಾಂಸ್ಕೃತಿಕ ನಿರ್ದೇಶಕರಾದ ಹರೀಶ್ ಬಾಕಿಲ ಭಾಗವಹಿಸಿದ್ದರು.
ಬಿಲ್ಲವ ಸಂಘದ ಸಲಹಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್ ಮಂಜಲಹಿತ್ಲು, ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಜನಾರ್ದನ್, ಯುವವಾಹಿನಿ ಮಾಣಿ ಘಟಕದ ಮಹಿಳಾ ನಿರ್ದೇಶಕಿ ಶಾಲಿನಿ ಜಗದೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಪ್ರಶಾಂತ್ ಅನಂತಾಡಿ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕರಾದ ತ್ರಿವೇಣಿ ರಮೇಶ್ ಮುಜಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ಭಾರತಿ ಬಾಬನಕಟ್ಟೆ ಪ್ರಾರ್ಥಿಸಿದರು. ಪ್ರಿಯಾ ಮಾಣಿ ವಂದಿಸಿದರು.
ನಂತರ ನಡೆದ ಪ್ರಸ್ತುತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಮಹಿಳೆ ಕುರಿತಂತೆ ಡಾ. ಮಂಜುಳಾ ರಾವ್, ಸಂಸ್ಕೃತಿ,ಸಂಸ್ಕಾರ ಮತ್ತು ಮಹಿಳೆ ಕುರಿತಂತೆ ವೀಣಾ ಶೆಟ್ಟಿ, ಉದ್ಯೋಗಾವಕಾಶಗಳು ಮತ್ತು ಮಹಿಳೆ ಕುರಿತಂತೆ ಪ್ರತಿಮಾ ಯು.ರೈ ವಿಚಾರಗಳನ್ನು ಮಂಡಿಸಿದರು. ಮಂಗಳೂರು ಮಹಾನಗರಪಾಲಿಕೆಯ ಮಾಜಿ ಕಾರ್ಪೋರೆಟರ್ ಪ್ರತಿಭಾ ಕುಳಾಯಿ ಸಮನ್ವಯದ ಮಾತುಗಳನ್ನಾಡಿದರು. ನಂತರ ನಡೆದ ಮನರಂಜನಾ ಆಟಗಳನ್ನು ಘಟಕದ ಕಾರ್ಯದರ್ಶಿ ರಾಜೇಶ್ ಎಸ್.ಬಲ್ಯ ನಿರ್ವಹಿಸಿದರು.
ಕಾರ್ಯಕ್ರಮಕ್ಕೆ ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಈಶ್ವರ ಪೂಜಾರಿ ಕಡೇಶಿವಾಲಯ, ಉಪಾಧ್ಯಕ್ಷರಾದ ಸೋಮಪ್ಪ ಸುವರ್ಣ ಮಾದೇಲು, ಮಾರಪ್ಪ ಸುವರ್ಣ, ಗಿರಿಯಪ್ಪ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ರಾಜೇಶ್ ಬಂಟ್ವಾಳ, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ, ಮಾಜಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಮಾಜಿ ಮಹಿಳಾ ನಿರ್ದೇಶಕಿ ಪಾರ್ವತಿ, ಯುವವಾಹಿನಿ ಮಾಣಿ ಘಟಕದ ಮಾಜಿ ಅಧ್ಯಕ್ಷರುಗಳಾದ ರಾಜೇಶ್ ಪೂಜಾರಿ ಬಾಬನಕಟ್ಟೆ,ರಮೇಶ್ ಮುಜಲ, ಮಹಿಳಾ ಘಟಕದ ಮಾಜಿ ಅಧ್ಯಕ್ಷರುಗಳಾದ ಗೀತಾ ಗೋಳಿಕಟ್ಟೆ, ರೋಹಿಣಿ ಶ್ರೀನಿವಾಸ್ ಆಗಮಿಸಿ ಶುಭಹಾರೈಸಿದರು.
Be the first to comment on "ಮಾಣಿಯಲ್ಲಿ ಇಳೆಯ ಬೆಳಕು ಮಹಿಳೆ – ಯುವವಾಹಿನಿಯಿಂದ ಕಾರ್ಯಕ್ರಮ"