



ಬಂಟ್ವಾಳ: ಮಾ.8ರಂದು ಕರ್ಪೆ ಸಮಾಜಮಂದಿರದಲ್ಲಿ ಮಣ್ಣಿ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮದಡಿ ವಿಜ್ಞಾನಿಗಳಿಂದ ರೈತರಿಗೆ ಮಣ್ಣು ಪರೀಕ್ಷಾ ಮಹತ್ವ ಕುರಿತ ತರಬೇತಿ ಹಾಗೂ ಇಲಾಖೆ ಅಧಿಕಾರಿಗಳಿಂದ ಇಲಾಖಾ ಸೌಲಭ್ಯಗಳ ಕುರಿತು ಮಾಹಿತಿ, ಕಂದಾಯ ಇಲಾಖೆಯೊಂದಿಗೆ ಜಂಟಿಯಾಗಿ ತಂತ್ರಾಂಶದಲ್ಲಿ ರೈತರ ಸರ್ವೆ ನಂಬರ್ ಗಳ ಜೋಡಣೆ ಕಾರ್ಯದ ನೋಂದಣಿ ಕಾರ್ಯಕ್ರಮ ಜರುಗಲಿದೆ. ರೈತರು ಈ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಕೃಷಿ ಇಲಾಖೆಯ ವತಿಯಿಂದ ಕೋರಲಾಗಿದೆ. ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಗಳನ್ನು ಜೋಡಿಸಲು ಈ ದಿನ ತಮ್ಮ ಎಲ್ಲಾ ಸರ್ವೆ ನಂಬರ್ ಗಳ ಮಾಹಿತಿ ಆಧಾರ್ ಪ್ರತಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ತರಲು ಕೋರಲಾಗಿದೆ.
Be the first to comment on "ಕರ್ಪೆಯಲ್ಲಿ ಮಾ.8ರಂದು ಮಣ್ಣು ಪರೀಕ್ಷಾ ಮಹತ್ವ ಕುರಿತು ತರಬೇತಿ, ಸರ್ವೆ ನಂಬರ್ ಜೋಡಣೆ ಕಾರ್ಯ ನೋಂದಣಿ"