ಬಂಟ್ವಾಳ: ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿಗಳು ರಥಸಪ್ತಮಿ ಹಿನ್ನೆಲೆಯಲ್ಲಿ ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ವಿದ್ಯಾಕೇಂದ್ರದ ವಿಶಾಲವಾದ ಮೈದಾನದಲ್ಲಿ ನೆರವೇರಿಸಿದರು.
ಶ್ರೀರಾಮ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸೂರ್ಯನ ಕಿರಣಗಳ ರಚನೆಯನ್ನು ಸಾಲುಗಳ ಮೂಲಕ ಮಾಡಿದರು. ಬಳಿಕ ಸೂರ್ಯನಮಸ್ಕಾರ ಮಂತ್ರವನ್ನು ಪಠಿಸಿದರು. ಇದರೊಂದಿಗೆ ಸೂರ್ಯಮಸ್ಕಾರಗಳನ್ನು ಮಾಡಿ ರಥಸಪ್ತಮಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಿನ್ಸಿಪಾಲ್ ವಸಂತ ಬಲ್ಲಾಳ ಧ್ವಜಾರೋಹಣಗೈದರು. ಶಾರೀರಿಕ ಶಿಕ್ಷಣ ಶಿಕ್ಷಕರಾದ ಪುರುಷೋತ್ತಮ ಮತ್ತು ಭಾಗ್ಯಶ್ರೀ ಈ ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕರಾದ ವಿನೋದ್ ಶೆಟ್ಟಿ ಸ್ವಾಗತಿಸಿದರು, ಜಿನ್ನಪ್ಪ ವಂದಿಸಿದರು.
Be the first to comment on "ರಥಸಪ್ತಮಿ ಹಿನ್ನೆಲೆ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ"