ಬಂಟ್ವಾಳ: ಕಲ್ಲಡ್ಕದ ನೇತಾಜಿ ಯುವಕ ಮಂಡಲ (ರಿ) ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ನುಡಿನಮನ, ಗಣರಾಜ್ಯೋತ್ಸವ ಆಚರಣೆ ಜೊತೆಗೆ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಾಮರಸ್ಯ ಸಂಯೋಜಕ ಸುರೇಶ್ ಪರ್ಕಳ ಆಗಮಿಸಿದ್ದರು. ದೇಶ ಸ್ವಾತಂತ್ರ ಪಡೆಯಲು ಮಹಾತ್ಮ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದೊಂದಿಗೆ ಚಂದ್ರಶೇಖರ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸರಂಥ ಕ್ರಾಂತಿಕಾರಿಗಳ ಹೋರಾಟವೂ ಕಾರಣವಾಯಿತು ಎಂದರು. ಗೌರವಾಧ್ಯಕ್ಷ ಶ್ರೀ ನಾಗೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಧನುಷ್ ಕಲ್ಲಡ್ಕ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು. ಅಧ್ಯಕ್ಷ ರಾಜೀವ ಕೊಟ್ಟಾರಿ ಸಹಿತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Be the first to comment on "ಕಲ್ಲಡ್ಕ ನೇತಾಜಿ ಯುವಕ ಮಂಡಲದಿಂದ ಗಣರಾಜ್ಯೋತ್ಸವ, ನೇತಾಜಿ ಸ್ಮರಣೆ"