ಬಂಟ್ವಾಳ: ಮಂಚಿ ಕೊಳ್ನಾಡು ಸರ್ಕಾರಿ ಹೈಸ್ಕೂಲ್, ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ಸಹಕಾರದೊಂದಿಗೆ ಜೀವನ್ಮುಖಿ ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಸಂದರ್ಭ ಶಿಕ್ಷಣ ಚಿಂತಕ ಗೋಪಾಡ್ಕರ್ ಜೊತೆ ಸಂವಾದ ನಡೆಯಿತು.
ಮಂಚಿ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸ್ವರೂಪ ಅಧ್ಯಯನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಗೋಪಾಡ್ಕರ್ ಮಾತನಾಡಿದರು.ಎರಡು ಕೈಗಳಲ್ಲಿ ಬರೆಯುವ ಮೂಲಕ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಾಡಿರುವ ಆದಿ ಸ್ಸರೂಪ ಜೊತೆ ಮಾತುಕತೆ ನಡೆಸಲಾಯಿತು. ತನ್ನ 10 ವಿಭಿನ್ನ ಪ್ರದರ್ಶನದ ಮೂಲಕ ಮೋಡಿ ಮಾಡಿದ ಆದಿಗೆ ಲಯನ್ಸ್‌ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.ಲಯನ್ಸ್ ಜೀವನ್ಮುಖಿ ಜಿಲ್ಲಾ ಸಂಯೋಜಕ ಪರಮೇಶ್ವರ ಪೂಜಾರಿ, ಸರ್ಕಾರಿ ಹೈಸ್ಕೂಲ್ ಮಂಚಿ ಮುಖ್ಯ ಶಿಕ್ಷಕಿ ಸುಶೀಲಾ, ಲಯನ್ಸ್ ವಲಯಾಧ್ಯಕ್ಷ ಮನೋರಂಜನ್ ಕರೈ ಶುಭ ಹಾರೈಸಿದರು.ಅಧ್ಯಕ್ಷತೆಯನ್ನು ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಖಂಡಿಗ ವಹಿಸಿದ್ದರು. ಮಂಚಿ ಪ್ರೌಢ ಶಾಲೆಯ ಸಹಶಿಕ್ಷಕರಾದ ವಿ. ಶ್ರೀರಾಮ ಮೂರ್ತಿ ಸ್ವಾಗತಿಸಿದರು, ಲಯನ್ಸ್ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ವಂದಿಸಿದರು.ತಾರನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಮಂಚಿ ಸರ್ಕಾರಿ ಹೈಸ್ಕೂಲ್, ಲಯನ್ಸ್ ಕೊಳ್ನಾಡು ವತಿಯಿಂದ ಜೀವನ್ಮುಖಿ ಕಾರ್ಯಕ್ರಮ"