ಬಂಟ್ವಾಳ: ತನ್ನ ಬದುಕಿನುದ್ದಕ್ಕೂ ಆದರ್ಶವನ್ನೇ ಮೆರೆದ ಶ್ಯಾಮರಾಯರ ಜೀವನ ಮೌಲ್ಯಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡುವ ದೊಡ್ಡ ಗೌರವ ಎಂದು ವಿಧಾನಪರಿಷತ್ ನ ಮಾಜಿ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.
ಕಲ್ಲಡ್ಕ ಉಮಾಶಿವ ಕ್ಷೇತ್ರದ ಜೀವೋನ್ಮತಿ ಸಭಾ ಭವನದಲ್ಲಿ ಭಾನುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾಯ ಆಚಾರ್ಯರಿಗೆ ನುಡಿ ನಮನ ಸಲ್ಲಿಸಿದರು.
ಪ್ರಾಚೀನ ವಸ್ತುಗಳ ಸಂಗ್ರಾಹಕ ಹಳ್ಳಿಮನೆ ಹೈದರ್ ಆಲಿ ಶ್ಯಾಮರಾಯರೊಂದಿಗಿನ ಒಡನಾಟದ ದಿನಗಳನ್ನು ಸ್ಮರಿಸಿಕೊಂಡರು. ವೇದಮೂರ್ತಿ ಶೀಧರ ಪುರೋಹಿತರು ಸದ್ಗತಿಗಾಗಿ ಪ್ರಾರ್ಥಿಸಿದರು. ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಕಮಲಾ ಪ್ರಭಾಕರ ಭಟ್, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಪುರುಷೋತ್ತಮ ಆಚಾರ್ಯ ಕೊಕ್ಕಡ , ನ್ಯಾಯವಾದಿ ಸಂತೋಷ್ ಆಚಾರ್ಯ, ಸೌತ್ ಕೆನರಾ ಗೋಲ್ಡ್ ಸ್ಮಿತ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕಿ ರೋಹಿಣಿ ರಾಘವ ಆಚಾರ್ಯ, ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಸಂದೀಪ್ ಆಚಾರ್ಯ, ಕಲ್ಲಡ್ಕ ಶಾರದಾ ಪೂಜಾ ಉತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಆಚಾರ್ಯ, ಶಾರದಾ ಪೂಜಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನರಸಿಂಹ ಮಡಿವಾಳ, ಗೌರವಾಧ್ಯಕ್ಷ ಚಿ.ರಮೇಶ್ ಕಲ್ಲಡ್ಕ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಸಲ್ಲಿಸಿದರು. ಶ್ಯಾಮರಾಯರ ಪುತ್ರ ಸತೀಶ್ ಸ್ವಾಗತಿಸಿದರು. ಪತ್ರಕರ್ತ ಮೌನೇಶ ವಿಶ್ವಕರ್ಮ ವಂದಿಸಿದರು. ಇದೇ ವೇಳೆ ಶಾಮರಾಯರ ಸ್ಮರಣಾರ್ಥ ಆಗಮಿಸಿದವರಿಗೆಲ್ಲ ಪರಿಸರ ಸಂರಕ್ಷಣೆಯ ದೃಷ್ಟಿಯಲ್ಲಿ ಸಸಿಗಳ ಬೀಜಗಳು, ಹಿಂದಿ ಕಲಿಕಾ ಪುಸ್ತಕ, ಚೀಲ ವಿತರಿಸಲಾಯಿತು.
Be the first to comment on "ಶಾಮರಾಯರ ಜೀವನ ಮೌಲ್ಯ ಅಳವಡಿಸುವುದು ಅವರಿಗೆ ನೀಡುವ ಗೌರವ: ಕ್ಯಾ. ಗಣೇಶ್ ಕಾರ್ಣಿಕ್"