ಬಂಟ್ವಾಳ: ಅಮ್ಟೂರು ಗ್ರಾಮದ ಕಟ್ಟೆಮಾರು ಪಡ್ಡೆಮಜಲು ಬಂಗೇರಕೋಡಿಗೆ ಹಾದುಹೋಗುವ 25 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬುಧವಾರ ಶಿಲಾನ್ಯಾಸ ನೆರವೇರಿಸಿದರು.
ಗೋಳ್ತಮಜಲು ಗ್ರಾಪಂ ವ್ಯಾಪ್ತಿಯ ಅಮ್ಟೂರು ಗ್ರಾಮದ ಕಟ್ಟೆಮಾರು ಪಡ್ಡೆಮಜಲು ಬಂಗೇರಕೋಡಿಗೆ ಹಾದು ಹೋಗುವ ರಸ್ತೆ 25 ಲಕ್ಷ ರೂ ವೆಚ್ಚದ ಶಾಸಕರ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ವಿಟ್ಲ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಅಮ್ಟೂರು ಗ್ರಾಮ ದೈವದ ಭಂಡಾರದ ಮನೆಯ ಪ್ರಮುಖರಾದ ಮೋಹನ್ ರಾಜ್ ಚೌಟ ತೆಂಗಿನಕಾಯಿ ಹೊಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ತಾಲೂಕು ಪಂಚಾಯಿತಿ ಸದಸ್ಯರಾದ ಮಹಾಬಲ ಆಳ್ವ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡರಾದ ದಿನೇಶ್ ಅಮ್ಟೂರು, ಸಮಿತಿಯ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಬೈದರಡ್ಕ, ಶ್ರೀಧರ್ ಸುವರ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಗೋಪಾಲಕೃಷ್ಣ ಪೂವಳ, ಗೋಪಾಲ ಪೂಜಾರಿ, ಜಯಂತ ಗೌಡ, ನಿರಂಜನ ಜೈನ್, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಮಹಾಬಲ ಸಾಲಿಯಾನ್, ಹಾಗೂ ಊರಿನ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು ಬಿಜೆಪಿ ಮುಖಂಡ ದಿನೇಶ್ ಅಮ್ಟೂರು ಸ್ವಾಗತಿಸಿದರು ಗೋಳ್ತಮಜಲು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಗೋಪಾಲಕೃಷ್ಣ ಪೂವಳ ವಂದಿಸಿದರು.
Be the first to comment on "ಅಮ್ಟೂರು ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಂದ ಶಿಲಾನ್ಯಾಸ"