ಬಿ.ಸಿ.ರೋಡು ಸುಂದರೀಕರಣ ಯೋಜನೆ ಕೆಲಸ ಕಾರ್ಯಗಳು ಸೋಮವಾರ ಆರಂಭಗೊಂಡಿದ್ದು, ಫ್ಲೈಓವರ್‌ನ ತಳಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮಾರ್ಕಿಂಗ್ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಹತ್ವಾಂಕಾಂಕ್ಷೆಯ ಯೋಜನೆ ಇದಾಗಿದ್ದು, ಕಾಮಗಾರಿಗೆ ಶಂಕುಸ್ಥಾಪನೆ ಬಳಿಕ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸ ಆರಂಭ ವಿಳಂಬಗೊಂಡಿತ್ತು. ಇದೀಗ ಇಂಟರ್ಲಾಕ್ ಹಾಕುವುದು, ರಸ್ತೆ ಅಭಿವೃದ್ಧಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮುಂಭಾಗ ಸರ್ಕಲ್ ನಿರ್ಮಾಣ ಹೀಗೆ ಹಲವು ಯೋಜನೆಗಳು ಖಾಸಗಿ ಸಂಸ್ಥೆಗಳ ಸಿಎಸ್ ಆರ್ ಫಂಡ್, ಸರ್ಕಾರದ ಅನುದಾನ ಸಹಿತ ನಗರ ಯೋಜನಾ ಪ್ರಾಧಿಕಾರದ ಸಹಕಾರದೊಂದಿಗೆ ನಡೆಯಲಿವೆ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೀಗ ಆಧುನಿಕ ಮಾಧರಿಯ ಶೌಚಾಲಯ ನಿರ್ಮಾಣ, ಬಳಿಕ ರಸ್ತೆ ಅಭಿವೃದ್ಧಿ ಸಹಿತ ಹಂತಹಂತವಾಗಿ ಕಾಮಗಾರಿ ನಡೆಯಲಿದೆ ಎಂದವರು ತಿಳಿಸಿದ್ದಾರೆ.
Be the first to comment on "ಬಿ.ಸಿ.ರೋಡ್ ಸೌಂದರ್ಯವೃದ್ಧಿ ಕಾಮಗಾರಿ ಆರಂಭ"