ಹಿರಿಯ ನಾಗರಿಕರಿಗೆ ಕಾಳಜಿ ಎಂಬ ಯೋಜನೆ ಸಹಿತ ಹಲವು ಆರ್ಥಿಕ ಚಟುವಟಿಕೆಗಳಿಗೆ ನೆರವು ನೀಡುವ ಯೋಜನೆಗಳೊಂದಿಗೆ ಬಂಟ್ವಾಳ ತಾಲೂಕಿನ ಮೇಲ್ಕಾರ್ ನ ಎಂ.ಎಚ್. ಹೈಟ್ಸ್ ನಲ್ಲಿ ಆ.21ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಶ್ರೀ ಶಂಕರ ಪತ್ತಿನ ಸಹಕಾರ ಸಂಘ ನಿ. ಆರಂಭಗೊಳ್ಳಲಿದೆ. ಈ ವಿಷಯವನ್ನು ಸಂಘದ ಮುಖ್ಯ ಪ್ರವರ್ತಕ ಕೈಯೂರು ನಾರಾಯಣ ಭಟ್ ಮೇಲ್ಕಾರ್ ನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ದೀಪೊಜ್ವಲನವನ್ನು ಸಂಸದ ನಳಿನ್ ಕುಮಾರ್ ಕಟೀಲು ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ.ಮಾಜಿ ಸಚಿವ ರಮಾನಾಥ ರೈ ಗಣಕಯಂತ್ರ ಉದ್ಘಾಟನೆ ಮಾಡಲಿದ್ದು, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಎಂ.ಎಚ್.ಹೈಟ್ಸ್ ನ ಮಾಲಕ ಮಹಮ್ಮದ್ ಇಕ್ಬಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.1000 ಸದಸ್ಯರ ಗುರಿಯನ್ನು ಹೊಂದಿದ್ದು ಈಗಾಗಲೇ ಸುಮಾರು 600ಕ್ಕಿಂತಲೂ ಅಧಿಕ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. 13 ಮಂದಿ ಸಹ ಪ್ರವರ್ತಕರು ಈ ಸಂಸ್ಥೆ ಯಲ್ಲಿ ಕಾರ್ಯನಿರ್ವಹಿಸಲಿದ್ದು ಸಿಬ್ಬಂದಿಗಳ ನೇಮಕಾತಿ ನಡೆದಿದೆ ಎಂದು ತಿಳಿಸಿದರು. ಸಹಪ್ರವರ್ತಕರಾದ ಜಯಾನಂದ ಪೆರಾಜೆ, ಜಯರಾಮ ಪೂಜಾರಿ, ಮುರಳೀಧರ ರಾವ್, ಎಂ.ಈಶ್ವರ ಭಟ್, ವೇದಮೂರ್ತಿ ಸುದರ್ಶನ ಮಯ್ಯ ಕೊಳಕೆ ಸುದ್ದಿಗೋಷ್ಡಿಯಲ್ಲಿ ಉಪಸ್ಥಿತರಿದ್ದರು.
Be the first to comment on "ಹಿರಿಯ ನಾಗರಿಕರಿಗೆ ‘ಕಾಳಜಿ’ ಸಹಿತ ಹಲವು ಯೋಜನೆಗಳೊಂದಿಗೆ 21ರಂದು ಶ್ರೀ ಶಂಕರ ಪತ್ತಿನ ಸಹಕಾರ ಸಂಘ ಪ್ರಾರಂಭ"