ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ತಾಲೂಕು ಪ್ರಖಂಡದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಹಿಂಪ ಸ್ಥಾಪನಾ ದಿನಾಚರಣೆ ಪ್ರಯುಕ್ತ ವಿಹಿಂ.ಪ., ಬಜರಂಗದಳ ನೂತನ ವಾಮದಪದವು ಘಟಕ ಕೇಸರಿ ಇದರ ಉದ್ಘಾಟನೆ ಕಾರ್ಯಕ್ರಮ ವಗ್ಗ, ಕಾಡಬೆಟ್ಟು ಶ್ರೀ ಶಾರದ ಭಜನ ಮಂದಿರದಲ್ಲಿ ಜರಗಿತು.
ವಿಹಿಂಪ ವೇಣೂರು ಪ್ರಖಂಡದ ಅಧ್ಯಕ್ಷ ಶಶಾಂಖ್ ಭಟ್ ಅವರು ನೂತನ ಘಟಕವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿ, ಭಗವದ್ಗೀತೆ ಮೂಲಕ ಶ್ರೀ ಕೃಷ್ಣ ಮಾನವ ಕುಲಕ್ಕೆ ದಿವ್ಯ ಸಂದೇಶ ನೀಡಿದ್ದಾನೆ. ಶ್ರೀ ಕೃಷ್ಣ ತತ್ವ ವಿಶ್ವವ್ಯಾಪಿಯಾಗಿದ್ದು ಮನಶ್ಯಾಸ್ತ್ರವಾಗಿ ಬಳಸಲ್ಪಟ್ಟಿದೆ ಎಂದು ನುಡಿದರು.
ವಿಹಿಂಪ ಜಿಲ್ಲಾ ಪ್ರಮುಖ್ ಸರಪಾಡಿ ಅಶೋಕ ಶೆಟ್ಟಿ ಅವರು ಮಾತನಾಡಿ, ಯುವ ಜನಾಂಗ ಕೃಷ್ಣ ತತ್ವದ ಉತ್ತಮ ವಿಚಾರವನ್ನು ಅಧ್ಯಯನ ಮಾಡಿ ತಪ್ಪು ನಡೆಯಲ್ಲಿ ನಡೆಯದೆ ಸುಸಂಸ್ಕೃತ ಸಮಾಜ ಕಟ್ಟಲು ಮುಂದಾಗಬೇಕು ಎಂದರು.
ಶ್ರೀ ಶಾರದಾ ಭಜನ ಮಂದಿರ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆ ಮೂಲಕ ಸೇವೆ, ಸುರಕ್ಷತೆ, ಸಂಸ್ಕಾರಗಳನ್ನು ಮೈಗೂಡಿಸಿ ಪ್ರತಿಯೊಬ್ಬರೂ ರಾಷ್ಟ್ರ ರಕ್ಷಣೆಯ ಕರ್ತವ್ಯಮುಖರಾಗಬೇಕು ಎಂದರು. ಬಜರಂಗದಳ ಸಂಚಾಲಕ ಶಿವ ಪ್ರಸಾದ್ ತುಂಬೆ ವೇದಿಕೆಯಲ್ಲಿದ್ದರು.
ಬಜರಂಗದಳ ಜಿಲ್ಲಾ ಸಹ ಸಂಚಾಲಕರಾದ ಭರತ್ ಕುಮ್ಡೇಲು, ಗುರುರಾಜ್ ಬಂಟ್ವಾಳ, ತಾಲೂಕು ಪ್ರಮುಖರಾದ ಭುವಿತ್ ಶೆಟ್ಟಿ, ಸಂತೋಷ್ ಕುಲಾಲ್, ಪ್ರಸಾದ್ ಬೆಂಜನಪದವು, ದೀಪಕ್ ಬಂಟ್ವಾಳ, ರೋಹಿತ್ ಕೊಡ್ಮಾಣ್, ನೂತನ ಘಟಕಾಧ್ಯಕ್ಷ ಸುರೇಶ್ ಬಂಗೇರ, ಪದಾಽಕಾರಿಗಳಾದ ಯಶವಂತ ಮಡಿವಾಳ, ಪ್ರಶ್ಮಿತ್, ರಾಜೇಶ್ ಪಚ್ಚಾಜೆ, ಜಿತೇಶ್, ಜಗದೀಶ್, ಲೋಕೇಶ್, ಚಂದ್ರ ಕುಮಾರ್, ನಿತಿಶ್, ಜಯಂತ್, ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ತಿಲಕವಿಟ್ಟು ಸ್ವಾಗತಿಸಲಾಯಿತು. ವಿಹಿಂಪ ಅಗ್ರಾರ್ ಶ್ರೀಹರಿ ಘಟಕ ತಂಡ ಭಾರತ ಮಾತಾ ಪೂಜನ ಭಜನೆ ನಡೆಸಿದರು. ಸಂದೀಪ್ ಅಗ್ರಾರ್ ಸ್ವಾಗತಿಸಿದರು. ಪದ್ಮನಾಭ ಅಗ್ರಾರ್ ವಂದಿಸಿದರು.
Be the first to comment on "ವಗ್ಗ: ವಿಹಿಂಪ ಸ್ಥಾಪನಾ ದಿನಾಚರಣೆ, ವಿಹಿಂಪ, ಬಜರಂಗದಳ ಘಟಕ ಉದ್ಘಾಟನೆ"