- ಆಸ್ಕರ್ ಫೆರ್ನಾಂಡೀಸ್, ಜನಾರ್ದನ ಪೂಜಾರಿ, ಬೇಕಲ್ ಖಾಜಿ, ಡಾ. ವೀರೇಂದ್ರ ಹೆಗ್ಗಡೆ ಭೇಟಿಯಾಗಲಿರುವ ಡಿ.ಕೆ.ಶಿವಕುಮಾರ್

D.K.SHIVAKUMAR


ದಕ್ಷಿಣ ಕನ್ನಡ ಜಿಲ್ಲೆಗೆ ಕೆಪಿಸಿಸಿಯ ನೂತನ ಸಾರಥಿ ಡಿ.ಕೆ.ಶಿವಕುಮಾರ್ ಜುಲೈ 31ರಂದು ಭೇಟಿ ನೀಡಲಿದ್ದಾರೆ. ಈ ವೇಳೆ ಹಿರಿಯ ಕಾಂಗ್ರೆಸ್ ನಾಯಕರೂ ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಫೆರ್ನಾಂಡೀಸ್ ಮತ್ತು ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಲಿದ್ದಾರೆ.
31ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿಗೆ ಆಗಮಿಸುವ ಶಿವಕುಮಾರ್, ಮೊದಲಿಗೆ ಆಸ್ಕರ್ ಫೆರ್ನಾಂಡೀಸ್ ಅವರನ್ನು ಭೇಟಿಯಾಗಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಬಂಟ್ವಾಳಕ್ಕೆ ಆಗಮಿಸಿ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗುವರು. ಅಲ್ಲಿಂದ ಮುಡಿಪುವಿಗೆ ಸಂಜೆ 4 ಗಂಟೆಗೆ ಇಸ್ಲಾಂ ಧರ್ಮಗುರುಗಳಾದ ಬೇಕಲ್ ಕಾಜಿ ಅವರನ್ನು ಭೇಟಿಯಾಗುವರು. ಸಂಜೆ ಧರ್ಮಸ್ಥಳಕ್ಕೆ ತಲುಪುವ ಅವರು, ಅಲ್ಲಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗುವರು. ಮರುದಿನ ಬೆಳಗ್ಗೆ ಧರ್ಮಸ್ಥಳದಿಂದ ಮಂಗಳೂರಿಗೆ ಬಂದು ಬೆಂಗಳೂರಿಗೆ ತೆರಳಲಿದ್ದಾರೆ.




Be the first to comment on "31ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದ.ಕ.ಜಿಲ್ಲೆಗೆ"